ಶಿವಮೊಗ್ಗದಿಂದ 14 ಕಿಲೋ ಮೀಟರ್ ದೂರದಲ್ಲಿರುವ ಸಕ್ರೆಬೈಲು ಆನೆ ಶಿಬಿರ ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತದೆ. ಆನೆ ಶಿಬಿರಕ್ಕೆ ಹತ್ತಿರದಲ್ಲಿ ಗಾಜನೂರು ಶಿಬಿರವಿದೆ. ಅನಾಥ ಆನೆಮರಿಗಳಿಗೆ ಇಲ್ಲಿ ಆಹಾರ ಮತ್ತು ನೆರಳು ನೀಡಲಾಗುತ್ತದೆ. ಅನುಭವೀ ಮಾವುತರಿಂದ ಇಲ್ಲಿನ ಆನೆಗಳಿಗೆ ತರಬೇತಿ ಮತ್ತು ಶಿಕ್ಷಣ ನೀಡಲಾಗುತ್ತದೆ.
ಸಕ್ರೆಬೈಲು ಆನೆಶಿಬಿರ ಮಕ್ಕಳೊಂದಿಗೆ ಭೇಟಿ ನೀಡಲು ಯೋಗ್ಯ ಸ್ಥಳ. ತುಂಗಾ ನದಿಯಲ್ಲಿ ಆನೆಗಳು ಸ್ನಾನ ಮಾಡುವ ಮನಮೋಹಕ ದೃಶ್ಯವನ್ನು ಎಲ್ಲರೂ ಇಷ್ಟಪಡುತ್ತಾರೆ. ಆನೆಗಳೊಂದಿಗೆ ನದಿಯಲ್ಲಿ ಆಟವಾಡುವುದಕ್ಕೂ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಭೇಟಿಯ ಸಮಯ ಬೆಳಗ್ಗೆ 8.30 ರಿಂದ 11 ಗಂಟೆ.
ಹತ್ತಿರದ ನಗರಗಳಿಂದ ಉತ್ತಮ ರಸ್ತೆ ಸಂಪರ್ಕವಿದೆ. ಶಿವಮೊಗ್ಗದಿಂದ ಬಸ್, ಟ್ಯಾಕ್ಸಿ ಮತ್ತು ಆಟೋಗಳ ಮೂಲಕ ಸಕ್ರೆಬೈಲು ಆನೆಶಿಬಿರವನ್ನು ತಲುಪಬಹುದು. ಶಿವಮೊಗ್ಗದವರೆಗೆ ರೈಲಿನಲ್ಲಿ ಬಂದು ನಂತರ ರಸ್ತೆಯ ಮೂಲಕ ಸಕ್ರೆಬೈಲು ಆನೆಶಿಬಿರಕ್ಕೆ ಬರಬಹುದು.


Click it and Unblock the Notifications