ಶಿವಪುರಿ ಸಣ್ಣ ಗ್ರಾಮವಾಗಿದ್ದು, ರಿಷಿಕೇಶದಿಂದ 16 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿನ ಬಹುತೇಕ ಮಂದಿರಗಳಲ್ಲಿ ಶಿವನಿಗೆ ಪೂಜೆ ಸಲ್ಲಿಸುವುದರಿಂದ ಇದಕ್ಕೆ ಶಿವಪುರಿ ಎಂಬ ಹೆಸರು ಬಂದಿದೆ. ಗಂಗಾ ನದಿಯ ದಡದ ಮೇಲೆ ನೆಲೆಸಿರುವ ಈ ಪಟ್ಟಣವು ರಿವರ್ ರಾಫ್ಟಿಂಗ್ ಗೆ ಹೇಳಿ ಮಾಡಿಸಿದ ತಾಣವಾಗಿದೆ. ಹಲವಾರು ಬೀಚ್ (ದಡ) ಕ್ಯಾಂಪ್ ಗಳು ಇಲ್ಲಿದ್ದು, ಸಾಹಸ ಪ್ರಿಯರು ಇಲ್ಲಿಂದ ರಿಷಿಕೇಶವರೆಗೆ ರಾಫ್ಟಿಂಗ್ ಮಾಡುತ್ತ ಥ್ರಿಲ್ ಅನುಭವಿಸಬಹುದು. ಪ್ರಶಾಂತವಾದ ವಾತಾವರಣವೂ ಇಲ್ಲಿನ ಮತ್ತೊಂದು ಆಕರ್ಷಣೆ.


Click it and Unblock the Notifications