ಛತ್ತೀಸ್ ಗಢ್ ನ ಅತ್ಯುತ್ತಮ ಮ್ಯೂಸಿಯಂಗಳಲ್ಲಿ ಒಂದಾಗಿರುವ ಮಹಾಂತ ಘಾಸಿದಾಸ್ ಮ್ಯೂಸಿಯಂ ರಾಯಪುರ್ ನ ಜನಪ್ರಿಯ ಪ್ರವಾಸಿ ತಾಣ. ನಗರದ ಡಿ.ಕೆ. ಆಸ್ಪತ್ರೆ ಸಮೀಪದಲ್ಲೇ ಈ ಮ್ಯೂಸಿಯಂ ಇದೆ.1875ರಲ್ಲಿ ರಾಜ ಮಹಾಂತ ಘಾಸಿದಾಸ್ ಮ್ಯೂಸಿಯಂನ್ನು ನಿರ್ಮಿಸಿದರು. ಎರಡು ಮಹಡಿಗಳ ಕಟ್ಟಡವನ್ನು ಬಳಿಕ ರಾಣಿ ಜ್ಯೋತಿ ದೇವಿ ಮತ್ತು 1953ರಲ್ಲಿ ದಿಗ್ವಿಜಯ್ ದಾಸ್ ನವೀಕರಿಸಿದರು. ಎರಡು ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವ ಮ್ಯೂಸಿಯಂನಲ್ಲಿ ಶಸ್ತ್ರಾಸ್ತ್ರಗಳ ಮಾದರಿಗಳು, ಪ್ರಾಚೀನ ನಾಣ್ಯಗಳು, ಶಾಸನಗಳು, ಶಿಲ್ಪಗಳು ಮತ್ತು ಕೆತ್ತನೆ ಮುಂತಾದವುಗಳಿವೆ.


Click it and Unblock the Notifications