ಅರಿಪಾಲ್ ನಾಗ್, ಇದು ಸುಂದರವಾದ ನೈಸರ್ಗಿಕ ನೀರಿನ ಒರತೆ. ಪುಲ್ವಾಮಾದ ಟ್ರಾಲ್ ಪಟ್ಟಣದಿಂದ 11 ಕಿ.ಮೀ ದೂರದಲ್ಲಿ ಈ ತಾಣವಿದೆ. ಪುಟ್ಟ ಗುಡ್ಡವಾದ ವಸ್ತೂರ‍್ ವ್ಯಾನ್‌ನ ಒಂದು ಮೂಲೆಯಿಂದ ಈ ನೀರು ಹರಿಯುತ್ತದೆ. ಈ ನೀರನ್ನು ಸುತ್ತಲಿನ ಹಳ್ಳಿಗಳ ಕೃಷಿಕರು ಕೃಷಿ ಉಪಯೋಗಕ್ಕೆ ಮತ್ತು ಕುಡಿಯುವ ನೀರಿನ ಅಗತ್ಯಕ್ಕೆಂದು ಬಳಸುತ್ತಾರೆ.


Click it and Unblock the Notifications