ಪೋರ್ಟ್ ಬ್ಲೇರ್ ನಿಂದ ಕೇವಲ 2 ಕಿ.ಮೀ ಪೂರ್ವಕ್ಕೆ ನೀವು ಇಲ್ಲಿಯವರೆಗೆ ನೋಡಿದ ಎಲ್ಲಾ ಅವಶೇಷಗಳಿಗಿಂತಲೂ ಸುಂದರವಾದ ಅವಶೇಷಗಳಿವೆ. ಬೇರೆ ಬೇರೆ ಕಾಲಾವಧಿಯ ಸುಂದರವಾದ ಅವಶೇಷಗಳನ್ನು ಹೊಂದಿರುವ ರಾಸ್ ದ್ವೀಪ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದಾಗಿದೆ. ಬ್ರಿಟೀಷರ ಅವಧಿಯಿಂದಲೂ ಇಲ್ಲಿ ಕಟ್ಟಲಾದ ಬೇರೆ ಬೇರೆ ತರಹದ ಕಟ್ಟಡಗಳು...
ಪೋರ್ಟ್ ಬ್ಲೇರ್ ನ ಈಶಾನ್ಯಕ್ಕೆ ಸುಮಾರು 84 ಮೈಲು ದೂರದಲ್ಲಿರುವ ಬ್ಯಾರನ್ ಒಂದು ಸಣ್ಣ ದ್ವೀಪವಾಗಿದೆ. ಇದು ದಕ್ಷಿಣ ಏಷ್ಯಾ ಮತ್ತು ಭಾರತದಲ್ಲಿ ಇರುವ ಏಕಮಾತ್ರ ಜ್ವಲಂತ ಜ್ವಾಲಾಮುಖಿಯ ಸ್ಥಳವಾಗಿದೆ. ಹೊರಜಗತ್ತನ್ನು ಅನ್ವೇಷಿಸುವ ಮಾನವರ ಕುತೂಹಲದ ಗುಣದಿಂದಾಗಿ ಇದು ಇಂದು ಒಂದು ಪ್ರವಾಸಿ ತಾಣವಾಗಿದೆ.
ಹೆಸರೆ ಹೇಳುವಂತೆ...
1906 ರಲ್ಲಿ ಸ್ಥಾಪನೆಗೊಂಡ ಕುಖ್ಯಾತ ಸೆಲ್ಯುಲರ್ ಜೈಲಿಗಿಂತಲೂ ಮುಂಚೆ ಬಳಸಲಾಗುತ್ತಿದ್ದ ಜೈಲಿನ ಕಾರಣದಿಂದ ಈ ದ್ವೀಪ ಪ್ರಖ್ಯಾತವಾಗಿದೆ. ಇದು ಪೋರ್ಟ್ ಬ್ಲೇರ್ ಗೆ ಸುಮಾರು 8 ಕಿ.ಮೀ ವಾಯವ್ಯಕ್ಕೆ ಇದೆ. ಹಾಗೂ ಇದನ್ನು ದೋಣಿಯ ಮೂಲಕ ತಲುಪಬಹುದಾಗಿದೆ. ಈ ದ್ವೀಪದ ಹೆಸರು ಹೇಗೆ ಹುಟ್ಟಿಕೊಂಡಿತು ಎಂಬ ಬಗ್ಗೆ ಎರಡು ಕೌತುಕಮಯ...
ಇದು ರಾಜಧಾನಿ ನಗರ ಪೋರ್ಟ್ ಬ್ಲೇರ್ ಗೆ ಸಮೀಪದಲ್ಲಿರುವ ನಗರ ಮತ್ತು ಹೆಚ್ಚಿನ ಪ್ರವಾಸಿಗರು ಇದನ್ನು ಸ್ವರ್ಗಕ್ಕಿಂತ ಸ್ವಲ್ಪವೂ ಕಡಿಮೆ ಇರದ ದ್ವೀಪವೆಂದು ಕರೆಯುತ್ತಾರೆ. ಇದು ವಂದೂರು ರಾಷ್ಟ್ರೀಯ ಸಾಗರ ಉದ್ಯಾನವೆಂದು ಪ್ರಖ್ಯಾತವಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಸಾಗರ ಉದ್ಯಾನದ ಒಂದು ಭಾಗವಾಗಿದೆ. ಹಾಗು ಈ ದ್ವೀಪ ಇಲ್ಲಿ...