ಇದೊಂದು ಮೆಟ್ಟಿಲುಗಳಿರುವ ಬಾವಿ. ಇದನ್ನು ರಾಣಿ ಉದಯಮತಿಯು 1063ರಲ್ಲಿ ತನ್ನ ಪ್ರೀತಿಯ ಗಂಡ ರಾಜ ಮೊದಲನೇ ಭೀಮದೇವನ ನೆನಪಿಗೆ ಕಟ್ಟಿಸಿದಳಂತೆ. ಈತ ಸೋಲಂಕಿ ವಂಶದ ಸಂಸ್ಥಾಪಕ. ಇಲ್ಲಿಗೆ ನೀರು ಸರಸ್ವತಿ ನದಿಯಿಂದ ಬರುತ್ತದೆ. ಇದರಲ್ಲಿನ ಸ್ತಂಭಗಳು ನಮ್ಮನ್ನು ಸೋಲಂಕಿಯರ ಕಾಲದ ವಾಸ್ತುಶಿಲ್ಪವೈಭವದ ಕಾಲಕ್ಕೆ ಕೊಂಡೊಯ್ಯುತ್ತವೆ. ಇಲ್ಲಿನ ಬಹುಪಾಲು ಕೆತ್ತನೆಗಳು ವಿಷ್ಣು ಮತ್ತವನ ಅವತಾರಗಳಾದ ರಾಮ, ವಾಮನ, ಮಹಿಷಾಸುರಮರ್ಧಿನಿ, ಕಲ್ಕಿ ಇತ್ಯಾದಿಗಳನ್ನು ಒಳಗೊಂಡಿದೆ.


Click it and Unblock the Notifications