ಜೋಧ್ಪುರ್ ವಿಮಾನ ನಿಲ್ದಾಣವು ಪಾಲಿಗೆ ಅತ್ಯಂತ ಸಮೀಪದ ದೇಶೀಯ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣವು ಇಲ್ಲಿಂದ 80 ಕಿ.ಮೀ ದೂರದಲ್ಲಿದೆ. ಇದು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ಉತ್ತಮ ಸಂಪರ್ಕ ವಿಮಾನಗಳ ಸೇವೆಯನ್ನು ಹೊಂದಿದೆ. ಅಲ್ಲದೆ ಜೋಧ್ ಪುರ್ ವಿಮಾನ ನಿಲ್ದಾಣವು ಜೈಪುರ್ ಮತ್ತು ಮುಂಬಯಿಗಳ ನಡುವೆ ಸಹ ಉತ್ತಮ ಸಂಪರ್ಕ ವಿಮಾನಗಳ ಸೇವೆಯನ್ನು ಹೊಂದಿದೆ. ಪ್ರವಾಸಿಗರು ಇಲ್ಲಿಂದ ಟ್ಯಾಕ್ಸಿಗಳ ಮೂಲಕ ಪಾಲಿಗೆ ತಲುಪಬಹುದು.