ಬೋಗಾರ್ ಸಮಾಧಿಯು ಮುರುಗನ ದೇವಾಲಯದ ದಕ್ಷಿಣ-ಪಶ್ಚಿಮ ದಿಕ್ಕಿನಲ್ಲಿದೆ. ಬೋಗಾರ್ ಮುರುಗನ ಭಕ್ತ. ಈತನೇ ಮುರುಗನ ಮೂಲ ವಿಗ್ರಹವನ್ನು ಕೆತ್ತಿದ ಎಂದು ನಂಬಲಾಗಿದೆ. ಈತ ಸಿದ್ಧ ವೈದ್ಯಕೀಯ ಪದ್ಧತಿಯನ್ನು ಅಭ್ಯಾಸ ಮಾಡುತ್ತಿದ್ದ. ಈ ಪದ್ಧತಿಯನ್ನು ಪ್ರಚುರಪಡಿಸಲು ಚೀನಾಗೆ ಹೋಗಿಬಂದಿದ್ದ. ಬೋಗಾರನ ಸಮಾಧಿಯಿಂದ ಮುರುಗನ ಮೂಲ ವಿಗ್ರಹವಿರುವ ಸ್ಥಳಕ್ಕೆ ಹೋಗಲು ರಹಸ್ಯ ಸುರಂಗ ಮಾರ್ಗವಿದೆ ಎಂದು ನಂಬಲಾಗಿದೆ. ಈ ದೇವಾಲಯದಲ್ಲಿ ಮಾರಗಾತ ಶಿವಲಿಂಗ ಮತ್ತು ಅರುಳ್ಮಿಗು ಭುವನೇಶ್ವರಿ ಅಮ್ಮನ ದೇವಾಲಯಗಳಿವೆ.


Click it and Unblock the Notifications