ಈ ಸ್ಥಳವನ್ನು ದಿನ್ಮನ್ ಹರ್ದೌಲ್ ರ ನೆನಪಿಗಾಗಿ ಕಟ್ಟಿಸಲಾಗಿದೆ. ಈತನು ತನ್ನ ಅಣ್ಣ ಝುಜಾಲ್ ಗಾಗಿ ತನ್ನ ಬದುಕನ್ನು ತ್ಯಾಗ ಮಾಡಿದ್ದನು. ನಡೆದಿದ್ದೆನೆಂದರೆ ಆತನ ಅಣ್ಣ ತನ್ನ ಪ್ರಿಯತಮೆಯೊಂದಿಗೆ ದಿನ್ಮನ್ ಹರ್ದೌಲ್ ಪ್ರೇಮ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ಆಪಾದಿಸಿದ್ದನು. ಇದರಿಂದ ಆಘಾತಕ್ಕೊಳಗಾದ ದಿನ್ಮನ್ ತನ್ನ ಪ್ರಾಮಾಣಿಕತೆಯನ್ನು ಸಾಬೀತುಪಡಿಸಲು ಪ್ರಾಣವನ್ನೇ ತ್ಯಾಗ ಮಾಡಿದನು. ಸಜ್ಜನ ವ್ಯಕ್ತಿಯಾಗಿದ್ದ ದಿನ್ಮನ್ ನ ಹಠಾತ್ ಸಾವಿನ ನಂತರ ಅವನ ಅನುಯಾಯಿ ಜನರು ಅವನ ಸ್ಮರಣಾರ್ಥವಾಗಿ ಈ ಅರಮನೆಯನ್ನು ಕಟ್ಟಿಸಿದರು.
ದಿನ್ಮನ್ ಹರ್ದೌಲ್ ನ ನೆನಪಿಗಾಗಿ ಕಟ್ಟಲಾದ ಈ ಕಟ್ಟಡದ ನಿರ್ಮಾಣದ ಸಮಯದಲ್ಲಿ ಇಲ್ಲಿನ ಸ್ಥಳೀಯ ಕಟ್ಟಡ ರಚನೆಗಾರರು ತಮ್ಮ ಅಧ್ಬುತವಾದ ಕಲ್ಪನಾ ಶಕ್ತಿ ಮತ್ತು ಕಲಾ ಅಭಿರುಚಿಯನ್ನು ತೋರಿಸಿದ್ದಾರೆ. ಈ ಸ್ಥಳವು ಸಹೋದರರಿಬ್ಬರ ನಡುವಿನ ಪ್ರೇಮ ಹಾಗೂ ಗೌರವ ಭಾವವನ್ನು ತೋರಿಸುತ್ತದೆ. ಇಲ್ಲಿನ ವಾಸ್ತುಶಿಲ್ಪದ ಕಾರಣದಿಂದಾಗಿ ಪ್ರತಿವರ್ಷ ಸಾವಿರಾರು ಮಂದಿ ಇಲ್ಲಿಗೆ ಆಗಮಿಸುತ್ತಾರೆ.