Search
  • Follow NativePlanet
Share
ಮುಖಪುಟ » ಸ್ಥಳಗಳು » ಓರಛಾ » ಹವಾಮಾನ

ಓರಛಾ ಹವಾಮಾನ

ಓರಛಾ ಭೇಟಿಗೆ ಅತ್ಯುತ್ತಮ ಋತುವೆಂದರೆ ಅಕ್ಟೋಬರ್ ತಿಂಗಳು ಮತ್ತು ಚಳಿಗಾಲದ ಪ್ರಚಲಿತವಾಗಿರುವ ಮಾರ್ಚ್ ತಿಂಗಳ ನಡುವಿನ ಅವಧಿ ಈ ತಿಂಗಳಿಗಳಲ್ಲಿ ಓರಛಾ ಪ್ರದೇಶದ ಸೌಂದರ್ಯವನ್ನು ಸವಿಯಲು ಸೂಕ್ತವಾದ ಸಮಯ. ಅದರಲ್ಲೂ ಓರಛಾದಲ್ಲಿ ಚಳಿಗಾಲ ಆರಂಭವಾಯಿತೆಂದರೆ ಉತ್ಸವಗಳೂ ಪ್ರಾರಂಭಗೊಳ್ಳುತ್ತವೆ. ಆದ್ದರಿಂದ ಈ ಉತ್ಸವಗಳಲ್ಲಿ ಪಾಲ್ಗೋಳ್ಳಲ್ಲು ಇದೇ ಸರಿಯಾದ ಸಮಯ!

ಬೇಸಿಗೆಗಾಲ

ಓರಛಾ ಪ್ರದೇಶ ಬೇಸಿಗೆಯ ಋತುವಿನಲ್ಲಿ ಸಾಕಷ್ಟು ಬಿಸಿಯಾಗಿರುತ್ತದೆ ಮತ್ತು ತಾಪಮಾನ 48 ಡಿ. ಸೆಲ್ಷಿಯಸ್ ನಷ್ಟು ಹೆಚ್ಚಾಗಬಹುದು. ಬೇಸಿಗೆ ಏಪ್ರಿಲ್ ನಿಂದ  ಜೂನ್ ತಿಮ್ಗಳಿನವರೆಗೆ ಇರುತ್ತದೆ. ಪ್ರವಾಸಿಗರು ಬೇಸಿಗೆ ಕಾಲದಲ್ಲಿ ಓರಛಾಕ್ಕೆ ಭೇಟಿ ನೀಡದಿರುವುದೇ ಒಳ್ಳೆಯದು.. ಆದರೆ ಪಲಾಶ್  ಹೂಬಿಡುವಿಕೆಯನ್ನು ಆನಂದಿಸಲು, ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಈ ಸ್ಥಳಕ್ಕೆ ಭೇಟಿ ನೀಡಬಹುದು. ಪ್ರವಾಸಿಗರು ಬೇಸಿಗೆಯಲ್ಲಿ ಈ ಸ್ಥಳಕ್ಕೆ ಬರುವಾಗ ಹತ್ತಿ ಬಟ್ಟೆಯನ್ನು ತರುವುದು ಉತ್ತಮ.

ಮಳೆಗಾಲ

ಮಳೆಗಾಲವು ಜುಲೈನಲ್ಲಿ ಆರಂಭವಾಗಿ ಸೆಪ್ಟೆಂಬರ್ ತನಕ ಅದರ ಪ್ರಭಾವ ಮುಂದುವರಿಯುತ್ತದೆ. ಮಧ್ಯಮ ಮಳೆ ಈ ಋತುವಿನಲ್ಲಿ ಸಂಭವಿಸುತ್ತದೆ. ಓರಛಾಕ್ಕೆ ಈ ಸಮಯದಲ್ಲಿ ಭೇಟಿ ಮಾಡಬಹುದು ಆದರೂ ವರ್ಷದ ಈ ಸಮಯದಲ್ಲಿ ಸಾಹಸ ಚಟುವಟಿಕೆಗಳಿಗೆ ಮತ್ತು ದೃಶ್ಯಗಳನ್ನು ನೋಡಲು ಅವನತಿ ಇಲ್ಲದಿರುವುದರಿಂದ ಈ ಸಮಯದ ಭೇಟಿ ಅಷ್ಟು ಸೂಕ್ತವಲ್ಲ. ಪ್ರವಾಸಿಗರು ಮಳೆಗಾಲದಲ್ಲಿ ಓರಛಾಕ್ಕೆ ಬರುವಾಗ ರೈನ್ಕೋಟ್  ಮತ್ತು ಛತ್ರಿಗಳನ್ನು ತಮ್ಮೊಂದಿಗೆ ತರುವುದು ಒಳಿತು.

ಚಳಿಗಾಲ

ಓರಛಾದಲ್ಲಿ ಚಳಿಗಾಲದಲ್ಲಿ ಕೂಡ 9 ಡಿ.ಸೆ ನಿಂದ 25 ಡಿ. ಸೆಲ್ಸಿಯಸ್ ನಷ್ಟು ಮಾತ್ರ  ತಾಪಮಾನ ದಾಖಲಾಗುತ್ತದೆ. ತಂಪಾದ ಮತ್ತು ಆಹ್ಲಾದಕರವಾಗಿರುವ ಹವಾಮಾನ ಹೊಂದಿರುವ ಈ ಅವಧಯಲ್ಲಿ ಓರಛಾದಲ್ಲಿ ಉಳಿಯಲಿ ಅತ್ಯುತ್ತಮವಾದ ಸಮಯ!  ಚಳಿಗಾಲದ ತಿಂಗಳು ಅಕ್ಟೋಬರ್ ನಿಂದ ಮಾರ್ಚ್ ತಿಂಗಳವರೆಗೆ ಕಂಡುಬರುತ್ತದೆ. ಒಟ್ಟಿನಲ್ಲಿ ಚಳಿಗಾಲ ಓರಛಾ ಪ್ರದೇಶದ ಯಾವುದೇ ದೃಶ್ಯಗಳನ್ನು ವೀಕ್ಷಿಸಲು ಸರಿಯಾದ ಸಮಯ.