ಶ್ರೀ ರಘುನಾಥ ದೇವಾಲಯ ನಿಜಾಮಾಬಾದ್ ಪ್ರದೇಶದ ಹಿಂದೂಗಳಿಗೆ ಪವಿತ್ರ ಸ್ಥಳವಾಗಿದೆ. ಇದು ವಾರದ ಎಲ್ಲಾ ದಿನಗಳಲ್ಲೂ ತೆರೆದಿದ್ದು ಹೆಚ್ಚಿನ ಸಂಖ್ಯೆಯ ಭಕ್ತರನ್ನು ತನ್ನತ್ತ ಸೆಳೆಯುತ್ತದೆ.
ಇದು ರಾಮ ಭಕ್ತರ ದೇವಾಲಯವಾಗಿದ್ದು ರಾಮನನ್ನು ಶ್ರೀ ವಿಷ್ಣುವಿನ ಒಂದು ಅವತಾರ ಎಂದು ನಂಬಲಾಗಿದೆ. ಇಲ್ಲಿ ಪೂಜೆಗೆ ಸುಂದರವಾದ ರಾಮನ ಮೂರ್ತಿಯಿದ್ದು ಅದರ ಜೊತೆಗೆ ರಾಮನ ತಮ್ಮ ಲಕ್ಷಣ ಮತ್ತು ಪತ್ನಿ ಸೀತಾದೇವಿಯ ಮೂರ್ತಿಯೂ ಇದೆ. ರಾಮನ 14 ವರ್ಷಗಳ ವನವಾಸದಲ್ಲಿ ರಾಮನ ಬೆಂಗಾವಲಾಗಿ ಇದ್ದ ಕಾರಣ ಮತ್ತು ಸೀತಾ ದೇವಿಯನ್ನು ರಾವಣನ ಸೆರೆಯಿಂದ ಬಿಡಿಸಿ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಕಾರಣ ಲಕ್ಷಮಣನನ್ನು ಇಲ್ಲಿ ಪೂಜಿಸಲಾಗುತ್ತದೆ. ಇದರ ಜೊತೆಗೆ ರಾಮನ ಪರಮಭಕ್ತ ಎಂದು ಕರೆಯಿಸಿಕೊಳ್ಳುವ ಹನುಮಂತನ ಮೂರ್ತಿಯೂ ಕೂಡ ಈ ದೇವಾಲಯದಲ್ಲಿದೆ.


Click it and Unblock the Notifications