ನೀಮಚ್ ನ ನವ ತೋರನ್ ದೇವಸ್ಥಾನ ಖೊರ್ ಹಳ್ಳಿಯಲ್ಲಿದೆ. ಈ ಸುಂದರ ದೇವಸ್ಥಾನವನ್ನು 11 ನೇ ಶತಮಾನದಲ್ಲಿ ಕಟ್ಟಲಾಗಿತ್ತು. ಈ ದೇವಸ್ಥಾನದಲ್ಲಿ ಆಲಂಕಾರಿಕ ಕಮಾನುಗಳನ್ನು ಉದ್ದ ಹಾಗೂ ಅಗಲವಾಗಿ, ಎರಡು ಸಾಲುಗಳಲ್ಲಿ ಸಿದ್ಧಗೊಳಿಸಿದ್ದು, ಅವುಗಳು ಮಧ್ಯದಲ್ಲಿ ಒಂದನ್ನೊಂದು ಹಾದು ಹೋಗುತ್ತವೆ. ಈ ದೇವಸ್ಥಾನದ ಛಾವಣಿಗೆ ಒಂದು ಜತೆ ಕಂಬಗಳು ಆಧಾರವಾಗಿದ್ದು, ಇದನ್ನು ಚಾವಡಿ ಮತ್ತು ಕೈ ಸಾಲೆಯಿಂದ ನೋಡಬಹುದಾಗಿದೆ. ಈ ಅದ್ಭುತ ದೇವಸ್ಥಾನದ ಮಧ್ಯದಲ್ಲಿರುವ ವರಾಹ ಮೂರ್ತಿಯೇ ಇಲ್ಲಿನೆ ಪ್ರಮುಖ ಆಕರ್ಷಣೆ. ದೇವಸ್ಥಾನದ ಅಂಚಿನಲ್ಲಿರುವ ಎಲೆಗಳ ಮಾದರಿ, ಹೂಮಾಲೆ ಧಾರಕ, ಮಕರದ ತಲೆ ಇತ್ಯಾದಿಗಳು ದೇವಸ್ಥಾನದ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಖೊರ್ ಹಳ್ಳಿಯಲ್ಲಿರುವ ವಿಕ್ರಮ್ ಸಿಮೆಂಟ್ ಕ್ಯಾಂಪಸ್ ನ ಪಕ್ಕದಲ್ಲಿ ಈ ದೇವಸ್ಥಾನವಿದೆ.


Click it and Unblock the Notifications