ಗುರುದ್ವಾರ್ ಗುರ್ ಪರ್ತಾಪ್ ಎಂಬುದು ಸಿಖ್ಖರ ಒಂಬತ್ತನೆಯ ಗುರುವಾದ ಗುರು ತೇಗ್ ಬಹದ್ದೂರ್ ಸಾಹಿಬ್ ಜೀಯವರ ನೆನಪಿನಾರ್ಥವಾಗಿ ಥಾನ ಬೆಹ್ರಮ್ ಎಂಬ ಹಳ್ಳಿಯಲ್ಲಿ ನಿರ್ಮಿಸಲಾಗಿರುವ ಒಂದು ಗುರುದ್ವಾರವಾಗಿದೆ. ಈ ಗುರುದ್ವಾರವಿರುವ ಸ್ಥಳವನ್ನು "ಪಂಜಾಬಿನ ಕೇಸರಿ" ಎಂದು ಕರೆಯಲ್ಪಡುತ್ತಿದ್ದ ಮಹಾರಾಜ ರಣ್‍ಜೀತ್ ಸಿಂಗ್‍ರವರು ನಿರ್ಮಿಸಿದರು. ಈ ಪ್ರದೇಶದಲ್ಲಿರುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಬಾಬಾಜೀಯವರು ಒಂದು ಬಾವಿಯನ್ನು ತೋಡಿಸಿದರು. ಅದು ಇಂದಿಗು ಈ ಗುರುದ್ವಾರದ ಆವರಣದಲ್ಲಿ ಹಾಗೆಯೇ ಇದೆ. ಈ ಗುರುದ್ವಾರವನ್ನು ಶಿರೋಮಣಿ ಗುರುದ್ವಾರ ಪರ್ಬಂಧಕ್‍ರವರು ನಿರ್ವಹಣೆ ಮಾಡುತ್ತಿದ್ದಾರೆ. ಇದು ರಹೊನ್ ರೈಲು ನಿಲ್ದಾಣದಿಂದ 10 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ.


Click it and Unblock the Notifications