ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರು ಇಲ್ಲಿನ ಪ್ರಮುಖವಾದ ಪುಣ್ಯಸ್ಥಳವೆನಿಸಿರುವ ಬ್ರಹ್ಮಾಶ್ರಮಕ್ಕೂ ಭೇಟಿ ನೀಡಬಹದು. ಈ ಆಶ್ರಮವು ನೈಸರ್ಗಿಕ ಕಲ್ಲುಬಂಡೆಗಳಿಂದ ರಚನೆಯಾದ ಗುಹೆ. ಈ ಗುಹೆಯು ಹಿಂದೆ ಕಾಳಿಕಾದೇವಿಯ ಪರಮ ಭಕ್ತರಾದ ಶ್ರೀ ರಾಮಕೃಷ್ಣ ಪರಮಹಂಸರಿಗೆ ಧ್ಯಾನ ಪೀಠವಾಗಿತ್ತಂತೆ. ಆದ್ದರಿಂದ ಧಾರ್ಮಿಕ ಹಿನ್ನೆಲೆ ಹಾಗೂ ವಿಶಿಷ್ಟ ಶೈಲಿಯ ರಚನೆಯಾದ ಬ್ರಹ್ಮಾಶ್ರಮವು ತನ್ನ ಧಾರ್ಮಿಕ ಪ್ರಾಮುಖ್ಯತೆ ಮತ್ತು ವಿಶಿಷ್ಟ ನಿರ್ಮಾಣದಿಂದ ಪ್ರಸಿದ್ಧ ಪುಣ್ಯ ಸ್ಥಳವೆನಿಸಿಕೊಂಡಿದೆ.


Click it and Unblock the Notifications