ಸದಾ ಹರಿಯುವ ನೀರಿಯಿಂದ ಸೃಷ್ಟಿಯಾಗಿರುವ ಅಮೃತ ಕೊಳ ಪ್ರವಾಸಿಗರ ಮನದುಂಬುತ್ತದೆ. ಈ ಅಮೃತಕೊಳಕ್ಕೆ ಮಕರಂದದ ಕೊಳ, ಪವಿತ್ರಜಲದ ಕೊಳ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಸ್ಥಳೀಯ ನೀರಿನ ಮೂಲದಿಂದಲೇ ರೂಪುಗೊಂಡಿರುವ ಅಮೃತ ಕೊಳವು ಪ್ರವಾಸಿಗರಿಗೆ ಇಂದಿಗೂ ಆಕರ್ಷಣೀಯ ತಾಣವಾಗಿದೆ.ಅಮೃತ ಸರೋವರದಲ್ಲಿ ವರ್ಷವಿಡೀ ನೀರು ತುಂಬಿರುತ್ತದೆ. ಅಮೃತ ಕೊಳವನ್ನು ಬೆಳದಿಂಗಳಿನ ರಾತ್ರಿಗಳಲ್ಲಿ ಸುಂದರ ಚಂದ್ರನ ಬೆಳಕಿನಲ್ಲಿ ನೋಡುವುದೇ ಚೆಂದ. ಬೆಳದಿಂಗಳಿನಿಂದ ಸುಂದರ ಹೊಳಪು ಪಡೆದುಕೊಂಡ ಅಮೃತಸರೋವರದ ನೋಟ ವರ್ಣಿಸಲಸಾಧ್ಯ.ಅಮೃತ ಸರೋವರವನ್ನು ನೋಡ ಬಯಸುವ ಪ್ರವಾಸಿಗರು ಇಲ್ಲಿಗೆ ರಸ್ತೆ ಮಾರ್ಗವಾಗಿ ಬೆಂಗಳೂರಿನಿಂದ (68ಕಿಮೀ) ತಲುಪಬಹುದಾಗಿದೆ. ಇಲ್ಲಿರುವ ಯೋಗ ನಂದೀಶ್ವರ ದೇವಾಲಯ, ಚಬೂತ್ರ ಮತ್ತು ಉಗ್ರ ನರಸಿಂಹ ದೇವಾಲಯ ಅಮೃತ ಸರೋವರದ ಸನಿಹದಲ್ಲಿರುವ ಮತ್ತೊಂದು ಪ್ರಮುಖ ಆಕರ್ಷಣೆಯಾಗಿವೆ.


Click it and Unblock the Notifications