ಸಿಖ್ ಧರ್ಮದ ಐದು ಪ್ರಮುಖ ಸಿಂಹಾಸನಗಳಲ್ಲಿ ಹುಜೂರ್ ಸಾಹೇಬ್ ಗುರುದ್ವಾರ ಕೂಡ ಒಂದು. ನಾಂದೇಡ್ ನಗರದಲ್ಲಿ ಪ್ರಶಾಂತವಾಗಿ ಹರಿಯುವ ಗೋದಾವರಿ ನದಿಯ ತಟದಲ್ಲಿ ನಿರ್ಮಾಣವಾಗಿದೆ. ಸಿಖ್ ಶೈಲಿಯ ವಾಸ್ತುಶಿಲ್ಪವನ್ನು ಮೈಗೂಡಿಸಿಕೊಂಡಿದ್ದು ಸಿಖ್ ಧಾರ್ಮಿಕ ಆಚರಣೆಗೆ ಅನುಕೂಲಕರವಾಗಿದೆ. ಪ್ರತಿನಿತ್ಯ ಬೆಳಗ್ಗೆ ಗುರದ್ವಾರದಲ್ಲಿ ಎಲ್ಲಾ ಯುದ್ಧ ಅಸ್ತ್ರಗಳನ್ನು ತೊಳೆದು ನಡೆಸುವ ಪೂಜಾ ವಿಧಿವಿಧಾನಗಳಲ್ಲಿ ಭಾಗವಹಿಸುವುದು ಉತ್ತಮ ಅನುಭವ. ಈ ಸಂದರ್ಭದಲ್ಲಿ ಭಕ್ತರ ಭಾವನೆಗಳು ಹಾಗೂ ಉತ್ಷ್ರೇಕ್ಷೆಗಳೆರಡೂ ಹೆಚ್ಚಾಗುವುದನ್ನು ಪರವಶರಾಗುವುದನ್ನು ನೋಡುವುದೆ ಚಂದ.


Click it and Unblock the Notifications