Search
 • Follow NativePlanet
Share
ಮುಖಪುಟ » ಸ್ಥಳಗಳು » ಮೈಸೂರು » ಆಕರ್ಷಣೆಗಳು » ಜಾನಪದ ವಸ್ತು ಸಂಗ್ರಹಾಲಯ

ಜಾನಪದ ವಸ್ತು ಸಂಗ್ರಹಾಲಯ, ಮೈಸೂರು

1

ಪ್ರವಾಸಿಗರು ಸುಂದರವಾದ ಜಯಲಕ್ಷ್ಮಿ ವಿಲಾಸ್ ಬಂಗಲೆಯಲ್ಲಿರುವ ಜಾನಪದ ಸಂಗ್ರಹಾಲಯಕ್ಕೆ ಮೈಸೂರಿಗೆ ಹೋದ ಸಂದರ್ಭದಲ್ಲಿ ಭೇಟಿ ನೀಡಬಹುದು. 1968 ರಲ್ಲಿ ಸ್ಥಾಪಿತವಾಗಿರುವ ಸಂಗ್ರಹಾಲಯದಲ್ಲಿ 650ಕ್ಕೂ ಹೆಚ್ಚು ಜಾನಪದ ವಸ್ತುಗಳನ್ನು, ಕೈಗೊಂಬೆಗಳನ್ನು, ದಕ್ಷಿಣಭಾರತದ ಆಟಿಕೆಗಳನ್ನು ಮತ್ತು ಗೃಹಬಳಕೆಯ ವಸ್ತುಗಳನ್ನು ಹೊಂದಿದೆ. ಇದರೊಂದಿಗೆ ಸಂಗ್ರಹಾಲಯವು ವಿವಿಧ ನೃತ್ಯ, ನಾಟಕ ಮತ್ತು ಸಂಗೀತದ ಸಲಕರಣೆಗಳನ್ನು ಪ್ರದರ್ಶಿಸುತ್ತದೆ.ಸಂಗ್ರಹಾಲಯದ ಪ್ರದರ್ಶನ ಕೇಂದ್ರವನ್ನು ವಿವಿಧ ವರ್ಗಗಳಾಗಿ ವಿಂಗಡಿಸಲಾಗಿದ್ದು, ಬೊಂಬೆಗಳು, ಜಾನಪದ, ಸಂಗೀತ, ಸಾಹಿತ್ಯ, ಕಲೆ ಮತ್ತು ಜಾನಪದ ಜೀವನ ಇವುಗಳನ್ನು ಕಾಣಬಹುದು. ಸಂಗ್ರಹಾಲಯದ ಬೊಂಬೆಗಳ ವಿಭಾಗದಲ್ಲಿ ತಲೆಭೂತ, ಕೈಭೂತ, ಮಾರಿ, ಸೋಮ ಮತ್ತು ಗಡಿಮಾರಿಗಳಂತಹ ಆಟಗಳಲ್ಲಿ ಉಪಯೋಗಿಸುತ್ತಿದ್ದ ಅನೇಕ ಗಾತ್ರದ ಬೊಂಬೆಗಳನ್ನು ಕಾಣಬಹುದು. ಜಾನಪದ ಜೀವನ ಶೈಲಿಯ ವಿಭಾಗದಲ್ಲಿ ಮೀನುಗಾರರು, ಕುಂಬಾರರು, ಅಂಬಿಗರು, ಕಮ್ಮಾರರು, ರೈತರು, ಚಮ್ಮಾರರು ಬಳಸುತ್ತಿದ್ದ ಸಲಕರಣೆಗಳನ್ನು ಮತ್ತು ಇತರೆ ಕರಕುಶಲ ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿದೆ. ಇವುಗಳ ಜೊತೆಗೆ ಈ ವಿಭಾಗವು ಆಯುಧಗಳು, ದೀಪಗಳು ಅಡುಗೆ ಪಾತ್ರೆಗಳು, ವ್ಯವಸಾಯದ ಬಳಕೆಗಳು, ಚಾವಟಿಗಳು, ಮಡಿಕೆಗಳು, ಮಣಿಗಳು ಮತ್ತು ಬುತ್ತಿಗಳನ್ನು ವಿಶೇಷವಾಗಿ ಹೊಂದಿದೆ.ಸಂಗ್ರಹಾಲಯದ ಜಾನಪದ ಕಲೆಗಳ ವಿಭಾಗದಲ್ಲಿ ಯಕ್ಷಗಾನ,ಕಥಕಲಿ,ಆಂದ್ರ ಪ್ರದೇಶದ ಜಾನಪದ ನಾಟಕಗಳ ಧಾರಣೆಗಳು, ವೈಶಿಷ್ಟ್ಯವಾದ ಹನುಮಾನ ಕಿರೀಟ ಮತ್ತಿತರೆ ಪದಾರ್ಥಗಳನ್ನು ಪ್ರದರ್ಶಿಸಿದೆ. ಪ್ರವಾಸಿಗರು ಈ ವಸ್ತು ಸಂಗ್ರಹಾಲಯಕ್ಕೆ ಸೋಮವಾರ ದಿಂದ ಶನಿವಾರದ ವರೆಗೆ ಮುಂಜಾನೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಭೇಟಿ ಕೊಡಬಹುದಾಗಿದ್ದು, ತಿಂಗಳಿನ ಪ್ರತಿ ಭಾನುವಾರ ಮತ್ತು ಎರಡನೇ ಶನಿವಾರದಂದು ಮುಚ್ಚಿರುತ್ತದೆ.

One Way
Return
From (Departure City)
To (Destination City)
Depart On
16 Jan,Wed
Return On
17 Jan,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
16 Jan,Wed
Check Out
17 Jan,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
16 Jan,Wed
Return On
17 Jan,Thu
 • Today
  Mysore
  24 OC
  75 OF
  UV Index: 10
  Sunny
 • Tomorrow
  Mysore
  18 OC
  64 OF
  UV Index: 11
  Partly cloudy
 • Day After
  Mysore
  19 OC
  65 OF
  UV Index: 11
  Partly cloudy