Search
  • Follow NativePlanet
Share
ಮುಖಪುಟ » ಸ್ಥಳಗಳು » ಮೌಂಟ್ ಅಬು » ಆಕರ್ಷಣೆಗಳು » ಮೌಂಟ್ ಅಬು ವನ್ಯಜೀವಿ ಧಾಮ

ಮೌಂಟ್ ಅಬು ವನ್ಯಜೀವಿ ಧಾಮ, ಮೌಂಟ್ ಅಬು

1

ಮೌಂಟ್ ಅಬು ಗಿರಿಧಾಮಕ್ಕೆ ಹೋಗುವ ಯಾವುದೇ ಪ್ರವಾಸಿಗರು ನೋಡಲೆ ಬೇಕಾದ ಸ್ಥಳಗಳಲ್ಲಿ ಮೌಂಟ್ ಅಬು ವನ್ಯಜೀವಿ ಧಾಮವು ಪ್ರಮುಖವಾದುದಾಗಿದೆ. ಈ ಧಾಮವು ಅರಾವಳಿ ಪರ್ವತ ಶ್ರೇಣಿಯಲ್ಲಿ ಮತ್ತು ಅದರ ತಪ್ಪಲು ಪ್ರದೇಶದಲ್ಲಿ ನೆಲೆಸಿದೆ. ಇದು ಸುಮಾರು 19 ಕಿ.ಮೀ ಉದ್ದ ಮತ್ತು 5-8 ಕಿ.ಮೀ ಅಗಲವನ್ನು ಹೊಂದಿದೆ. 1960 ರಲ್ಲಿ ಈ ಅರಣ್ಯವನ್ನು ವನ್ಯಜೀವಿ ಧಾಮವೆಂದು ಘೋಷಿಸಲಾಯಿತು. ಈ ಸ್ಥಳವು ಪ್ರವಾಸಿಗರಿಗೆ ವಿವಿಧ ಬಗೆಯ ಸಸ್ಯ ಮತ್ತು ಪ್ರಾಣಿ ಪ್ರಭೇದಗಳನ್ನು ನೋಡುವ ಭಾಗ್ಯವನ್ನು ಒದಗಿಸುತ್ತದೆ. ಹಾಗಾಗಿ ಈ ಸ್ಥಳವು ಪ್ರಕೃತಿ ಪ್ರಿಯರಿಗೆ ಮತ್ತು ವನ್ಯ ಜೀವಿ ಆಸಕ್ತರಿಗೆ ರಸದೌತಣವನ್ನು ಉಣಿಸುತ್ತದೆ. ಮೌಂಟ್ ಅಬು ವನ್ಯಜೀವಿ ಧಾಮವು ವಿಶೇಷವಾಗಿ ಸಸ್ಯ ಸಂಪತ್ತಿನ ಆಗರವಾಗಿದೆ. ಇದು 820 ಬಗೆಯ ಸಸ್ಯಗಳಿಗೆ ಆಶ್ರಯವನ್ನೊದಗಿಸಿದೆ. ಇಷ್ಟೇ ಅಲ್ಲದೆ ಈ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಆರ್ಕಿಡ್ ಹೂವುಗಳನ್ನು ಸಹ ನಾವು ಕಾಣಬಹುದು. ಇದರೊಂದಿಗೆ ಈ ವನ್ಯಜೀವಿ ಧಾಮದ ಸುತ್ತ –ಮುತ್ತ ಹಸಿರಿನಿಂದ ಕೂಡಿದ್ದು, ತನ್ನಲ್ಲಿರುವ ಪ್ರಾಣಿ ಸಂಪತ್ತಿಗಾಗಿ ಪ್ರಸಿದ್ಧಿ ಪಡೆದಿದೆ. ವನ್ಯಜೀವಿ ಪ್ರಿಯರು ಇಲ್ಲಿಗೆ ಇಲ್ಲಿನ ವಿಶಿಷ್ಟವಾದ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿ ಪ್ರಭೇದಗಳನ್ನು ನೋಡಲು ಆಗಮಿಸುತ್ತಿರುತ್ತಾರೆ. ಹಿಂದೆ ಈ ಬೆಟ್ಟಗಳಲ್ಲಿ ಹುಲಿ ಮತ್ತು ಸಿಂಹಗಳು ಕಂಡುಬರುತ್ತಿದ್ದವು. ಆದರೆ ಈಗ ಕೇವಲ ಬೆಕ್ಕಿನ ಜಾತಿಯ ಮಾಂಸಾಹಾರಿ ಪ್ರಾಣಿಗಳು ಮಾತ್ರ ಕಂಡುಬರುತ್ತವೆ. ಅವುಗಳಲ್ಲಿ ಪ್ರಮುಖವಾದುದು ಚಿರತೆ. ಅಷ್ಟೇ ಅಲ್ಲದೆ ಈ ಧಾಮವು ಸಾಂಬರ್ ಜಿಂಕೆ, ಕಾಡು ಹಂದಿ, ಕರಡಿ, ನರಿ, ಭಾರತದ ಗುಳ್ಳೆ ನರಿ, ತೋಳ, ಕತ್ತೆ ಕಿರುಬ, ಭಾರತೀಯ ಪುನುಗು ಬೆಕ್ಕು ಮತ್ತು ಕಾಡು ಬೆಕ್ಕುಗಳಂತಹ ವಿಪುಲವಾದ ವನ್ಯಜೀವಿಗಳಿಗೆ ಆಶ್ರಯ ನೀಡಿದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu