ಮಣಿ ಮಂದಿರವು ಮೋರ್ಬಿಯ ಅತ್ಯುತ್ತಮ ಆಕರ್ಷಣೆಗಳಲ್ಲಿ ಒಂದು. ಮೋರ್ಬಿಯ ರಾಜ ತನ್ನ ರಾಣಿ ಮಹಾರಾಣಿ ಮಣಿ ಬೆನ್ ನೆನಪಿಗಾಗಿ ಕಟ್ಟಿಸಿದ ಬಹು ಧಾರ್ಮಿಕ ದೇವಾಲಯ ಇದಾಗಿದೆ.
ಇಂಜಿನಿಯರಿಂಗ್ ವಿಸ್ಮಯವನ್ನು ಹೊಂದಿರುವ ಅದ್ಬುತವಾದ ಈ ಮೊರ್ಬಿ ತೂಗು ಸೇತುವೆಯು ಲಂಡನ್ ನ ವಿಕ್ಟೋರಿಯನ್ ಸೇತುವೆಯನ್ನು ಹೋಲುತ್ತದೆ. ಗುಜರಾತ್ ಅನ್ನು ಭೇಟಿ ನೀಡುವವರು ಇದನ್ನು ಖಂಡಿತವಾಗಿ ನೋಡಲೇಬೇಕು. ಇದು ಮೋರ್ಬಿ ನಗರದಲ್ಲಿದೆ.
ಗುಜರಾತಿನ ಮೊರ್ಬಿಯಲ್ಲಿರುವ ಆರ್ಟ್ ಡೆಕೊ ಪ್ಯಾಲೇಸ್ ಅನ್ನು 1931 ರಲ್ಲಿ ನಿರ್ಮಿಸಲಾಗಿದೆ. ಇದು ತನ್ನ ಉತ್ಕೃಷ್ಟ ಮಟ್ಟದ ಒಳಾಂಗಣ ವಿನ್ಯಾಸಗಳಿಗಾಗಿ ಹೆಸರುವಾಸಿಯಾಗಿದೆ.
ಗುಜರಾತಿನ ಮೊರ್ಬಿಯಲ್ಲಿರುವ ವೆಲ್ಲಿಂಗ್ಟನ್ ಸಚಿವಾಲಯವು ತನ್ನ ಕಟ್ಟಡದ ವಾಸ್ತುಶಿಲ್ಪದಿಂದಾಗಿ ಹೆಚ್ಚು ಪ್ರಸಿದ್ಧಿಯಾಗಿದೆ. ಇದರಲ್ಲಿ ರಾಜಸ್ಥನಿ ಶೈಲಿಯ ಪ್ರಭಾವವನ್ನು ಗಮನಾರ್ಹವಾಗಿ ಕಾಣಬಹುದು.
ಈ ಹಸಿರು ಚೌಕವನ್ನು 3 ಬಾಗಿಲುಗಳ ಮೂಲಕ ಸುಲಭವಾಗಿ ತಲುಪಬಹುದು. ಇದು ನೋಡಲೇಬೇಕಾದ ಸ್ಥಳವಾಗಿದೆ.