ಮರಾರಿಕುಲಂ ಬೀಚ್, ಸ್ವಚ್ಛವಾದ ಅಪರೂಪದ ಸಮುದ್ರ ತೀರ. ತೀರದಲ್ಲಿ ಬೆಳೆದಿರುವ ಪಾಮ್ ಟ್ರೀಗಳು ಬೀಚ್ಅನ್ನು ಇನ್ನಷ್ಟು ಸುಂದರವಾಗಿಸಿದೆ. ಕೇರಳ ಕರಾವಳಿಯಲ್ಲಿರುವ ಬೀಚ್ಗಳಲ್ಲೇ ಅತ್ಯಂತ ಸ್ವಚ್ಛವಾದ ಮತ್ತು ಪ್ರಶಾಂತವಾದ ಬೀಚ್ ಎಂದು ಇದನ್ನು ಪರಿಗಣಿಸಲಾಗಿದೆ. ಬೀಚ್ನಲ್ಲಿ ಜನಸಂದಣಿ ಇಲ್ಲ. ಇಲ್ಲಿನ ಬಿಳಿ ಬಣ್ಣದ ಮರಳಿನ ಮೇಲೆ ನಡೆದಾಡುವುದೇ ಪ್ರವಾಸಿಗರಿಗೆ ಒಂದು ಸುಂದರ ಅನುಭವ.
ದೇವಸ್ಥಾನಗಳು ಮತ್ತು ಧಾರ್ಮಿಕ ಕೇಂದ್ರಗಳು ಸಮುದ್ರ ತೀರಕ್ಕೆ ಇನ್ನಷ್ಟು ಸೌಂದರ್ಯವನ್ನು ನೀಡುತ್ತದೆ. ಇಡೀ ದಿನ ನೀವು ಇಲ್ಲಿ ಕಳೆಯಬಹುದು. ಸೂರ್ಯನ ಝಳದ ಮಧುರ ಅನುಭವವನ್ನು ಹೀರಿಕೊಳ್ಳುತ್ತಾ, ವಿಲಾಸವಾಗಿ ದಿನಕಳೆಯಬಹುದು. ಅದೂ ಅಲ್ಲದೇ ಇಲ್ಲಿನ ಸ್ಥಳೀಯರನ್ನು ಭೇಟಿ ಮಾಡಿ ಅವರ ಸಂಸ್ಕೃತಿಯನ್ನು ಅರಿಯಬಹುದು. ಆಯುರ್ವೇದಿಕ್ ಚಿಕಿತ್ಸೆಯನ್ನೂ ಪಡೆಯಬಹುದು. ವಾಲಿಬಾಲ್, ಪ್ಯಾರಾಸೇಲಿಂಗ್, ಈಜು ಮತ್ತು ಇತರ ಜಲಕ್ರೀಡೆಗಳನ್ನು ಆಡಿ ಬೀಚ್ನಲ್ಲಿ ಖುಷಿಪಡಬಹುದು.


Click it and Unblock the Notifications