ಅಲಪ್ಪುಳದಿಂದ ಸುಮಾರು 22 ಕಿ.ಮೀ ದೂರದಲ್ಲಿರುವ ಅರ್ಥುಂಕಲ್ ಒಂದು ಸಣ್ಣ ಹಳ್ಳಿ. ಹಿಂದೂ ಮತ್ತು ಕ್ರಿಶ್ಚಿಯನ್ನರಿಗೆ ಈ ಹಳ್ಳಿ ಅತ್ಯಂತ ಪ್ರಮುಖ ಧಾರ್ಮಿಕ ಪ್ರವಾಸಿ ತಾಣ. ಆರ್ಥುಂಕಲಾಗ್ರಾ ಎಂಬ ಮೂಲನಾಮದಿಂದ ಆರ್ಥುಂಕಲ್ ಹೆಸರು ಬಂದಿದೆ.
ಆರ್ಥುಂಕಲ್ ಚರ್ಚ್ ಅನ್ನು ಆರ್ಥುಂಕಲ್ ಸಂತ ಫಾರೇನ್ರ ಚರ್ಚ್ ಎಂದು ಅಧಿಕೃತವಾಗಿ ಕರೆಯಲಾಗುತ್ತದೆ. ಪೋರ್ಚುಗೀಸರ ಕಾಲದಲ್ಲಿ ಸುಮಾರು 16ನೇ ಶತಮಾನದಲ್ಲಿ ಈ ಚರ್ಚ್ಅನ್ನು ಸ್ಥಾಪಿಸಲಾಗಿದೆ. ಆರ್ಥುಂಕಲ್ ಚರ್ಚ್ಅನ್ನು 1638 ರಲ್ಲಿ ಮತ್ತೆ ಪುನರ್ನಿರ್ಮಾಣ ಮಾಡಲಾಯಿತು. ಇದನ್ನು ಮತ್ತೆ ನಿರ್ಮಿಸಿದ್ದವರು ವಿಕಾರ್ ಫ್ರಾ. ಜಾಕೋಮಾ ಫೆನಿಸಿಯೋ. ಇವರಿಗೆ ವಿಶೇಷವಾದ ಹೀಲಿಂಗ್ ಶಕ್ತಿ ಇತ್ತು ಎಂದು ನಂಬಲಾಗಿತ್ತು.
1647ರಲ್ಲಿ ಸಂತ ಸೆಬಾಸ್ಟಿಯನ್ರ ಮೂರ್ತಿಯನ್ನು ತಂದು ಮಿಲನ್ನಲ್ಲಿ ಕೆತ್ತನೆ ಮಾಡಿ ಚರ್ಚ್ನಲ್ಲಿ ಸ್ಥಾಪಿಸಲಾಯಿತು. ಆರ್ಥುಂಕಲ್ ಸಂತ ಫೊರೇನ್ರ ಚರ್ಚ್ ಏಳನೇ ಬೆಸಿಲಿಕಾ ಆಗಿದೆ ಮತ್ತು ಕೇರಳದಲ್ಲಿನ ಮೂರನೇ ಲ್ಯಾಟಿನ್ ಕ್ಯಾಥೊಲಿಕ್ ಚರ್ಚ್.


Click it and Unblock the Notifications