ಶ್ರೀ ಮಂದವ್ ಘರ್ ತೀರ್ಥವು ಮಾಂಡು ನಗರದ ಕೋಟೆಯ ಒಳಗೆ ಇದೆ. ಇವತ್ತಿಗೂ ಹಿಂದೂ ಮೌಲ್ಯಗಳನ್ನು ಜೀವಂತವಾಗಿಟ್ಟು ಕೊಂಡಿರುವ ಕೆಲವೇ ಕೆಲವು ಐತಿಹಾಸಿಕ ದೇವಾಲಯಗಳಲ್ಲಿ ಇದೂ ಒಂದು. ಮಾಂಡು, ಆನಂದ ನಗರಿ, ಮಂದವ್ ಘರ್ ಅಂತೆಲ್ಲ ಹೆಸರುಗಳು ಬದಲಾಗುತ್ತಿದ್ದರೂ ನಗರದ ಕೋಟೆ ಗೋಡೆಗಳ ಭವ್ಯತೆ ಮಾತ್ರ ಇದ್ಯಾವುದನ್ನೂ ಲೆಕ್ಕಿಸದೆ ಸ್ಥಿರವಾಗಿ ನಿಂತಿದೆ. ಮಾಂಡುವಿನ ಭವ್ಯ ಪರಂಪರೆಗೆ ಇನ್ನೊಂದು ಗರಿ ಸೇರಿಸುವಂತಿದೆ ಶ್ರೀ ಮಂದವ್ ಘರ್ ತೀರ್ಥದ ಈ ದೇವಸ್ಥಾನ.
ಗರ್ಭಗುಡಿಯಲ್ಲಿರುವ ಆರಾಧ್ಯದೈವ ಸುಪಾರ್ಶ್ವನಾಥರ ಪ್ರತಿಮೆ ಶ್ವೇತಶಿಲೆಯದ್ದಾಗಿದ್ದು, ಪದ್ಮಾಸನ ಭಂಗಿಯಲ್ಲಿ ಧ್ಯಾನಿಸುತ್ತಿರುವಂತೆ ಚಿತ್ರಿಸಲಾಗಿದೆ. ಈ ಅನನ್ಯ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಇಂದಿಗೂ ಸುಸ್ಥಿತಿಯಲ್ಲಿದೆ. ಶ್ರೀ ಜೈನ ಶ್ವೇತಾಂಬರ ತೀರ್ಥ ಪೆಧಿಯವರು ದೇವಾಲಯ ಹಾಗೂ ಅದರ ಸುತ್ತಲಿನ ಭೊಜನಶಾಲಾ ಮತ್ತು ಧರ್ಮಶಾಲಾಗಳ ನಿರ್ವಹಣಾ ಜವಾಬ್ಧಾರಿಯನ್ನು ನಿಭಾಯಿಸುತ್ತಿದ್ದಾರೆ.


Click it and Unblock the Notifications