ಅಂದು ರಕ್ಷಣಾಪಡೆಗೆ ನಿರೀಕ್ಷಣಾಲಯವಾಗಿ ನಿರ್ಮಿಸಿದ್ದ ಮರಳುಗಲ್ಲಿನ ಬೃಹತ್ ಕಟ್ಟಡವೇ ಇಂದು ರೂಪಮತಿ ಭದ್ರಮಂಟಪ ಎಂದು ಹೆಸರು ಪಡೆದಿದೆ. ಬಾಜ್ ಬಹದ್ದೂರ್ ನ ಪ್ರೀತಿಯ ರಾಣಿ ರೂಪಮತಿ ಇಲ್ಲಿರುತ್ತಿದ್ದಳು. ಇವರೀರ್ವರ ಪ್ರೀತಿ ಮತ್ತು ಸಾಹಸದ ಹಲವಾರು ಕಥೆಗಳು ಚಾಲ್ತಿಯಲ್ಲಿವೆ. ರೂಪಮತಿಯ ಈ ನಿಲಯವು ಬಾಜ್ ಬಹದ್ದೂರನ ಅರಮನೆಯಿಂದ ಕೂಗಳತೆ ದೂರದಲ್ಲಿ, ರಾಣಿ ನರ್ಮದೆಯ ನಾಟ್ಯವನ್ನು ವೀಕ್ಷಿಸಲು ಅನುವಾಗುವ ರೀತಿಯಲ್ಲಿ ಇದನ್ನು ಕಟ್ಟಿಸಲಾಗಿದೆ.
ಪ್ರತಿಧ್ವನಿ ಕೇಂದ್ರವಾಗಿರುವ ಈ ಅರಮನೆಯು ಅದ್ಬುತವಾದ ಬಾಹ್ಯ ಸೌಂದರ್ಯವನ್ನು ಹೊಂದಿದ್ದು ತನ್ನ ಸಿನಿಮೀಯ ದೃಶ್ಯಾವಳಿಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.


Click it and Unblock the Notifications