ಎಲ್ಲರಿಗೂ ತಿಳಿದಂತೆ ದರ್ವಾಜ ಎಂದರೆ "ಗೇಟ್ವೇ ಅಥವಾ ಬಾಗಿಲು" . ಸ್ಮಾರಕನಗರಿಗೆ ಹೆಬ್ಬಾಗಿಲಾಗಿರುವುದೇ ಈ ಬಾಗಿಲುಗಳ ವೈಶಿಷ್ಟ್ಯ. ಐತಿಹಾಸಿಕ ಪ್ರಸಿದ್ಧವಾದ ಮಾಂಡು ನಗರದ ಪರಿಧಿಯೇ ಈ ಕೋಟೆಯಾಗಿದ್ದು, ಭಾರತದ ಇತಿಹಾಸದಲ್ಲಿ ಕೋಟೆಗಳಿಂದ ಭದ್ರಪಡಿಸಲ್ಪಟ್ಟ ನಗರಗಳಲ್ಲಿ ಇದೂ ಒಂದು. ಈ ಕ್ಷಣದವರೆಗೂ ತನ್ನ ಪ್ರತೀಷ್ಠೆಗೆ ತಕ್ಕಂತೆ ಕೋಟೆ ಸದೃಡವಾಗಿ, ಸುಭೀಕ್ಷವಾಗಿದೆ. 45 ಕಿಮೀ ಉದ್ದದ ಕೋಟೆಯ ಗೋಡೆಯು ಮಾಂಡುವನ್ನು ಸುತ್ತುವರೆದಿದ್ದು, ಅದರಲ್ಲಿ 12 ದ್ವಾರಗಳಿವೆ.
ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದೆಂದರೆ "ದೆಹಲಿ ದರ್ವಾಜಾ" . ಇದುವೇ ನಗರಕ್ಕೆ ಮುಖ್ಯ ಪ್ರವೇಶದ್ವಾರವಾಗಿದೆ. ಆದರೆ ಇಂದಿನ ರಸ್ತೆಮಾರ್ಗವು ಅಲಂಗಿರಿ ಮತ್ತು ಭಂಗಿ ದ್ವಾರಗಳ ಮೂಲಕ ನಗರವನ್ನು ಪ್ರವೇಶಿಸುತ್ತದೆ. ರಾಂಪೊಲ್ ದರ್ವಾಜಾ, ತಾರಾಪುರ ಗೇಟ್ ಮತ್ತು ಜಹಾಂಗೀರ್ ಗೇಟ್ ಗಳು ಇತರ ಕೆಲವು ಪ್ರಮುಖ ದ್ವಾರಗಳು. ಒಂದು ಸಾಮ್ರಾಜ್ಯದ ಹೆಬ್ಬಾಗಿಲು ಆ ಸಾಮ್ರಾಜ್ಯದ ಪ್ರಾಬಲ್ಯವನ್ನು ಹೊರಗಿನ ಜಗತ್ತಿಗೆ ಘೋಷಿಸುತ್ತದೆ ಎಂಬ ನಂಬಿಕೆ ಇದೆ. ಮಾಂಡುವಿನ ದ್ವಾರಗಳು ವಾಸ್ತುಶಿಲ್ಪ ಅದ್ಭುತಗಳುಳ್ಳ ಭವ್ಯವಾದ ರಚನೆಗಳಾಗಿವೆ.


Click it and Unblock the Notifications