ದೈ ಕಾ ಮಹಲ್ ಒಂದು ಪ್ರಮುಖ ಪ್ರವಾಸಿ ನೆಲೆಯಾಗಿದೆ. ಮಾಂಡು ಒಂದು ಸಮೃದ್ಧ ಸಾಮ್ರಾಜ್ಯ, ಈ ಸಾಮ್ರಾಜ್ಯದ ಉತ್ಕೃಷ್ಟತೆಯು ಅಲ್ಲಿನ ಅದ್ಬುತ ಸ್ಮಾರಕಗಳು, ಅರಮನೆಗಳು ಮತ್ತು ಕಟ್ಟಡಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ನಗರದ ಸುವರ್ಣ ಕಾಲದ ಕಟ್ಟಡಗಳ ಆಸಕ್ತಿದಾಯಕ ರಚನೆಯೇ ಈ ದಾಯ್ ಕಾ ಮಹಲ್ . 'ದೈ' ಇದರ ಅಕ್ಷರಶಃ ಅರ್ಥ "ದಾದಿ". ತಾಯಂದಿರ ಅನುಪಸ್ಥಿತಿಯಲ್ಲಿ ಅಥವಾ ಅಸಾಮರ್ಥ್ಯದಲ್ಲಿ ರಾಜವಂಶದಲ್ಲಿನ ಶಿಶುಗಳ ಲಾಲನೆ-ಪಾಲನೆಗಾಗಿ ದಾದಿಯರನ್ನು ನೇಮಿಸಿಕೊಳುತ್ತಿದ್ದು, ಅವರಿಗೆ ಅವರದ್ದೇ ಆದ ಸ್ಥಾನಮಾನಗಳಿರುತಿದ್ದವು. ದೈ ಕಾ ಮಹಲ್ ಗಿಂತ ದೈ ಕಿ ಚೊಟ್ಟಿ ಬೆಹೆನ್ ಕಿ ಮಹಲ್ ಮಾಂಡುವಿನಲ್ಲಿ ದಾದಿಯರಿಗಿದ್ದ ಅಧಿಕಾರ ಹಾಗು ಸಾಮಾಜಿಕ ಸ್ತರಕ್ಕೆ ಹಿಡಿದ ಕನ್ನಡಿಯಾಗಿದೆ.


Click it and Unblock the Notifications