Search
  • Follow NativePlanet
Share
ಮುಖಪುಟ » ಸ್ಥಳಗಳು » ಮಾಂಡು » ಆಕರ್ಷಣೆಗಳು » ಬಾಜ್ ಬಹಾದ್ದೂರ್ ನ ಅರಮನೆ

ಬಾಜ್ ಬಹಾದ್ದೂರ್ ನ ಅರಮನೆ, ಮಾಂಡು

6

ಬಾಜ್ ಬಹಾದ್ದೂರ್ ಅರಮನೆಯು ತನ್ನ ಅತ್ಯದ್ಬುತ ದೃಶ್ಯಾವಳಿಗಳೊಂದಿಗೆ  ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ದೊಡ್ಡ ಅಂಗಳ, ದೊಡ್ಡ ಕೋಣೆಗಳು ಮತ್ತು ತಾರಸಿಗಳುಳ್ಳ ಇದು, 16 ನೇ ಶತಮಾನದ ಕಟ್ಟಡ. ರೂಪಮತಿ ಮಹಲ್ಲಿನ ಅಂಗಳದಿಂದ ಈ ಅರಮನೆಯನ್ನು ಆರಾಮವಾಗಿ ನೋಡಬಹುದು.

ಬಾಜ್ ಬಹಾದ್ದೂರ್ ಮತ್ತು ರೂಪಮತಿಯರ ಇನ್ನುಳಿದ ಅರ್ಧ ಭಾಗದ ಪ್ರೇಮ ಕಥೆಯನ್ನು ಇದು ಬಿಂಬಿಸುತ್ತದೆ. ಕಾಲದ ಹೊಡೆತಕ್ಕೆ ಈ ಅರಮನೆ ಸಿಲುಕಿದೆಯಾದರೂ ಇದರ ಅಂಗಳದಲ್ಲಿ ನಡೆದು ಹೋಗುವಾಗ ಆ ಗತಕಾಲದ ಕೆಲವು ವಿಶೇಷತೆಗಳನ್ನು ಪ್ರವಾಸಿಗರು ತಮ್ಮ ಮನ ಪಟಲದಲ್ಲಿ ಅರಿಯಲು ಉತ್ತಮ ಅವಕಾಶವನ್ನು ಒದಗಿಸುತ್ತದೆ.

ಅರಮನೆ ಮುಂಭಾಗದ ಉದ್ಯಾನವಂತೂ ಮೈಮನ ಸೆಳೆಯುವುದರಲ್ಲಿ ಸಂಶಯವಿಲ್ಲ.  1509 ರಲ್ಲಿ ನಿರ್ಮಿಸಲ್ಪಟ್ಟ ಈ ಅರಮನೆಯಲ್ಲಿ ಹಲವು ಕೊಠಡಿಗಳಿದ್ದು, ಇಲ್ಲಿಯೆ ಸುಮಾರು 1555 ರಿಂದ 1561 ರ ವರೆಗೆ ಬಾಜ್ ಬಹಾದ್ದೂರ್ ಕಾರ್ಯಕಲಾಪವನ್ನು ನಡೆಸುತ್ತಿದ್ದನು. ಗತಕಾಲದ ಕಲೆ ಹಾಗು ವಾಸ್ತುಶಿಲ್ಪದ ವಿವರಣೆಗೆ ಇದೊಂದು ಉತ್ತಮ ಉದಾಹರಣೆಯಾಗಿ ನಿಲ್ಲುತ್ತದೆ.

 

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed

Near by City