ಪ್ಯಾರಾಗ್ಲೈಡಿಂಗ್ ಆಧುನಿಕ ಸಾಹಸ ಕ್ರೀಡೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ. ಮನಾಲಿಯಲ್ಲಿ ಇದು ಅತ್ಯಂತ ಜನಪ್ರಿಯ. ಮನಾಲಿಯಿಂದ 14 ಕಿ.ಮೀ. ದೂರದಲ್ಲಿರುವ ಸೋಲಂಗ್ ಕಣಿವೆ ಈ ಕ್ರೀಡೆಗೆ ಸೂಕ್ತ ತಾಣ. ಜನಪ್ರಿಯ ತಾಣವಾಗಿ ಇದು ಅಭಿವೃದ್ಧಿ ಹೊಂದಿದೆ. ಯುವ ಸಾಹಸಿಗಳಿಗೆ ಇದು ಸ್ವರ್ಗ. ಇಲ್ಲಿಗೆ ಟ್ಯಾಕ್ಸಿ ಅಥವಾ ಟ್ರೆಕ್ಕಿಂಗ್ ಮೂಲಕವೂ ತಲುಪಬಹುದು. ಇಲ್ಲಿ ಸಾಹಸದಲ್ಲಿ ತೊಡಗಲು ಮೇ ನಿಂದ ಸೆಪ್ಟೆಂಬರ್ ನಡುವಿನ ಅವಧಿ ಪ್ರಶಸ್ತ.


Click it and Unblock the Notifications