ಮನಾಲಿ ವನ್ಯಜೀವಿ ಧಾಮ ಅತ್ಯಂತ ಚಿಕ್ಕದಾದ ಪ್ರದೇಶವನ್ನು ಆವರಿಸಿಕೊಂಡಿದೆ. ಸುಮಾರು 31.8 ಚದರ್ ಕಿ.ಮಿ. ವಿಸ್ತಾರದಲ್ಲಿ ಹರಡಿಕೊಂಡಿದೆ. ಮನಾಲಿಯ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಇದೊಂದು. ಪಂಜಾಬ್ ಪಕ್ಷಿ ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆ 1933 ರ ಅಡಿ 1954 ರ ಫೆಬ್ರವರಿ 26 ರಂದು ಇದನ್ನು ವನ್ಯಜೀವಿ ಧಾಮ ಎಂದು ಘೋಷಿಸಲಾಗಿದೆ. ಪ್ರಾಣಿಗಳು, ಸರಿಸೃಪ, ಸಸ್ಯಾಹಾರಿ ಪ್ರಾಣಿಗಳು, ಪಕ್ಷಿ ಸಂಕುಲಗಳು ಇಲ್ಲಿವೆ.
ಸಾಮಾನ್ಯವಾಗಿ ಪ್ರವಾಸಿಗರು ಇಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ಜಿಂಕೆ, ಕಶ್ಮೀರಿ ಹಾರುವ ಅಳಿಲು, ಹಿಮಾಲಯದ ಕಪ್ಪು ಕರಡಿ, ಹಾರುವ ತೋಳ, ಹಿಮಾಲಯದ ಹಳದಿ ಕತ್ತಿನ ಮುಂಗುಸಿ, ಹಿಮಾಲಯದ ಪಾಮ್ ಕಿವಿಟ್ ಮತ್ತಿತರವು ಕಾಣಸಿಗುತ್ತವೆ. ಮುಸುಕು ಜಿಂಕೆ, ಹೈನಾ, ಚಿರತೆ, ಭಾರತೀಯ ಮೊಲ, ಕಂದು ಕರಡಿ, ಮೋನಲ್ ಪಕ್ಷಿ ಮತ್ತಿತರ ಪ್ರಾಣಿ, ಪಕ್ಷಿಗಳು ಇಲ್ಲಿವೆ.


Click it and Unblock the Notifications