ಈಶಾನ್ಯ ಭಾರತದ ವನ್ಯಜೀವಿಗಳನ್ನು ನೋಡಲು ಈ ಅರಣ್ಯಧಾಮ ಸೂಕ್ತ ಪ್ರದೇಶ. ಇದು ಮಿಜೋರಂನ ರಾಜಧಾನಿ ಐಜ್ವಾಲ್ನಿಂದ 170 ಕಿಮೀ ದೂರದಲ್ಲಿದೆ. ಈ ಅರಣ್ಯಧಾಮವು ಹಸಿರು ಬೆಟ್ಟಗಳು ಹಾಗೂ ಕಣಿವೆಗಳಿಂದ ಆವೃತವಾಗಿದೆ. ಇದು 1300 ಅಡಿ ಎತ್ತರದಲ್ಲಿದ್ದು 35 ಚದುರ ಕಿಮೀಗಳಷ್ಟು ವಿಸ್ತಾರವಾಗಿದೆ. ಈ ಅರಣ್ಯಧಾಮವು ಹಲವು ಬಗೆಯ ವನ್ಯಜೀವಿಗಳಿಗೆ ತವರುಮನೆಯಾಗಿದೆ. ಇಲ್ಲಿ ಸಿರೋ, ಬಾರ್ಕಿಂಗ್ ಡೀರ್, ಕಾಡು ಹಂದಿ, ಗಿಬ್ಬನ್, ಸಾಂಬಾ ಜಿಂಕೆ, ಹೂಲಾಕ್ ಮತ್ತು ಚಿರತೆಗಳನ್ನು ಕಾಣಬಹುದು. ಈ ಅರಣ್ಯಧಾಮವು ಪ್ರಕೃತಿ ಪ್ರಿಯರಿಗೆ ಪ್ರಾಕೃತಿಕ ಸೌಂದರ್ಯದ ರುಚಿಯನ್ನು ಉಣಬಡಿಸುತ್ತದೆ.
ಇಲ್ಲಿ ಕೆಲವು ದಿನ ಉಳಿಯ ಬಯಸುವ ಪ್ರವಾಸಿಗರಿಗೆ ಲುಂಗ್ಲೈನ ಅಲ್ಬಸ್ತಾ ಹೋಟೆಲ್ ಉತ್ತಮ ಆಯ್ಕೆ. ಕಾವ್ನಗ್ಲುಂಗ್ ಅರಣ್ಯಧಾಮಕ್ಕೆ ತಲುಪುವ ಉತ್ತಮ ಮಾರ್ಗವೆಂದರೆ ಐಜ್ವಾಲ್ನಿಂದ ಇಲ್ಲಿಗೆ ಪ್ರವಾಸಿವಾಹನವನ್ನು ಬಾಡಿಗೆಗೆ ತೆಗೆದುಕೊಂಡು ಬರುವುದು.


Click it and Unblock the Notifications