ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿಕೊಡುವ ಪ್ರವಾಸಿಗರು ಸಮಯಾವಕಾಶ ದೊರೆತರೆ ಒಮ್ಮೆ ಮತ್ಸ್ಯ ಮತ್ತು ಪಂಚಮಿ ತೀರ್ಥಗಳಿಗೆ ಭೇಟಿ ಕೊಡಬಹುದು. ಇಲ್ಲಿ ತೀರ್ಥ ಸ್ನಾನ ಮಾಡಿದರೆ ಸಕಲ ಪಾಪಗಳು ಪರಿಹಾರವಾಗುತ್ತದೆ ಎಂದು ನಂಬುತ್ತಾರೆ.ಮತ್ಸ್ಯ ತೀರ್ಥವು ಕುಮಾರಧಾರ ನದಿಯ ದಂಡೆಯಲ್ಲಿದೆ. ಪಂಚಮಿ ತೀರ್ಥವು ಕುಮಾರಧಾರಾ ನದಿಗೆ ಸಮೀಪದಲ್ಲಿದೆ. ಕೊನೆಯದಾಗಿ ಸುಬ್ರಹ್ಮಣ್ಯ ಮಠ ಎಂದು ಕರೆಯಲ್ಪಡುವ ರಾಯರ ಮಠವು ಇಲ್ಲಿದ್ದು, ಬೃಂದಾವನವನ್ನು ಹೊಂದಿದೆ.ಈ ತೀರ್ಥಗಳ ಸಮೀಪದಲ್ಲಿಯೆ ಸೋಮನಾಥ ದೇವಾಲಯ, ಅಗ್ರಹಾರ ಸೋಮನಾಥ ದೇವಾಲಯ ಮತ್ತು ಸುಬ್ರಹ್ಮಣ್ಯ ಮಠದ ಪರಮಪೂಜ್ಯ ಶ್ರೀ ವರಹಾ ತೀರ್ಥಗಳ ಪವಿತ್ರ ಸಮಾಧಿ ಇದೆ.ಕುಮಾರ ಧಾರ ನದಿಯಲ್ಲಿ ಪಂಚಮಿ ಸಂದರ್ಭದಲ್ಲಿ ಯಾತ್ರಾರ್ಥಿಗಳು ಇಲ್ಲಿ ಪವಿತ್ರ ಸ್ನಾನ ಕೈಗೊಳ್ಳುತ್ತಾರೆ.


Click it and Unblock the Notifications