ವಿಳಿಂಜಮ್ ಮರೈನ್ ಅಕ್ವೇರಿಯಂ ಮಕ್ಕಳಿಗೆ ಮಾತ್ರವಲ್ಲದೆ ವಯಸ್ಕರಿಗೂ ಅತ್ಯಂತ ಇಷ್ಟವಾಗುವ ಸ್ಥಳ. ಈ ಅಕ್ವೇರಿಯಂ ಇರುವುದು ತಿರುವನಂತಪುರಂ ನಲ್ಲಿ. ನದಿ ನೀರಿನ ತಳದಲ್ಲಿ ವಾಸಿಸುವಂತಹ ವಿಶೇಷವಾದ ಅಪರೂಪವಾದ ಜೀವಿಗಳನ್ನು ಒಳಗೊಂಡಿದೆ. ಅಲ್ಲದೇ ಈ ಅಕ್ವೇರಿಯಂ ಇಮೇಜ್ ಪರ್ಲ್ ಉತ್ಪಾದನಾ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿದೆ. ಈ ತಂತ್ರಜ್ಞಾನವನ್ನು ಪ್ರದರ್ಶಿಸಲು ಅಚ್ಚುಗಳನ್ನು ಮಾಡಲಿ ಸಿಮೆಂಟ್ ನ್ನು ಬಳಸಲಾಗಿದೆ. ಅಲ್ಲದೇ ಇಲ್ಲಿ ಮುತ್ತು ಹಾಗೂ ಚಿಪ್ಪುಗಳನ್ನು ಪರಿಚಯುದಲಾಗಿದೆ. ಇದನ್ನು ತಯಾರಿಸಿದ ಕೆಲವು ತಿಂಗಳುಗಳ ನಂತರ ಅಚ್ಚು ಮುತ್ತು ಹಾಗೂ ಚಿಲ್ಲಿನ ರೂಪದಲ್ಲಿ ಗೋಚರಿಸುತ್ತಿದ್ದು ಜನರನ್ನು ಹೆಚ್ಚು ಹೆಚ್ಚು ಆಕರ್ಷಿಸುತ್ತದೆ.
ನೀವು ಕೊವಲಂ ಗೆ ಪ್ರವಾಸಕ್ಕಾಗಿ ಮಕ್ಕಳನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದರೆ ವಿಳಿಂಜಮ್ ಮರೈನ್ ಅಕ್ವೇರಿಯಂ ನೋಡಲೇ ಬೇಕಾದ ಸ್ಥಳವಾಗಿದ್ದು ನಿಮ್ಮ ಮಗುವಿನ ಮನಸ್ಸುನಲ್ಲಿ ಸದಾ ಉಳಿಯುವಂತದ್ದು. ಈ ಅಕ್ವೇರಿಯಂ ನಲ್ಲಿ ನೀವು ಇದುವರೆಗೆ ನೋಡದೇ ಇರುವ ವಿಶಿಷ್ಟವಾದ ಸಮುದ್ರ ಜೀವಿಗಳನ್ನು, ಜಲಚರಗಳನ್ನು ನೋಡಬಹುದು. ಪ್ರಮುಖವಾಗಿ ಮೂನ್ ವರಾಸಸ್, ಏಡಿಗಳು, ಕ್ಲೌನ್ ಮೀನು,ಸಿಂಹ ಮೀನು, ದೈತ್ಯ ಆಮೆಗಳು, ಟ್ರಿಗರ್ ಮೀನು, (surgeonfish) ಸ್ಕ್ವಿರಿಲ್ಫಿಷ್, ಚಿಟ್ಟೆ ಮೀನು, ಶಾರ್ಕ್ ಹಾಗೂ ಪಿರಾನಾ ಮೊದಲಾದವುಗಳನ್ನು ಒಂದೇ ಸೂರಿನಡಿ ಕಾಣುಬಹುದು.
ಕೊವಲಂ ನ ಆಕರ್ಷಣೀಯಗಳಲ್ಲಿ ಒಂದಾದ ವಿಳಿಂಜಮ್ ಮರೈನ್ ಅಕ್ವೇರಿಯಂ ಕೇಂದ್ರೀಯ ಮರೈನ್ ಫೀಶರೀಸ್ ಸಂಶೋಧನಾ ಸಂಸ್ಥೆ ಅಥವಾ ಸಿ.ಎಮ್.ಎಫ್.ಆರ್.ಐ ನಿಂದ ನಿಯಂತ್ರಿಸಲ್ಪಟ್ಟಿದೆ. ಇದನ್ನು ನೋಡಲು ಬರುವ ಜನರಿಗಾಗಿ ವಾರದ ಎಲ್ಲಾ ದಿನವೂ ತೆರೆದಿರುತ್ತಿದ್ದು ಒಳಗೆ ಹೋಗಲು ಅನುಮತಿಯಿದೆ. ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯ ವರೆಗೂ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ.


Click it and Unblock the Notifications