Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊವಲಂ » ಆಕರ್ಷಣೆಗಳು » ಅರುವಿಕ್ಕರ ಪ್ರದೇಶ

ಅರುವಿಕ್ಕರ ಪ್ರದೇಶ, ಕೊವಲಂ

3

ತಿರುವನಂತಪುರಂ ಜಿಲ್ಲೆಯಲ್ಲಿಯೇ ಬರುವ ಅರುವಿಕ್ಕರ ಹಳ್ಳಿ ಅತ್ಯಂತ ಪ್ರಸಿದ್ಧವಾಗಿದೆ. ತಿರುವನಂತಪುರಂ ನಿಂದ 15 ಕೀ.ಮಿ ದೂರದಲ್ಲಿ ಅರುವಿಕ್ಕರ ಹಳ್ಳಿ ಇದೆ. ಇಲ್ಲಿ ಕರಮನಾ ನದಿಯು ಈ ಹಳ್ಳಿಯ ಮೂಲಕ ಹರಿದು ಹೋಗುತ್ತದೆ. ಈ ಹಳ್ಳಿಯು ಜಲಾಶಯ ಹಾಗೂ ಉದ್ಯಾನಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಸ್ಥಳೀಯರು ಮಾತ್ರವಲ್ಲದೆ ಪ್ರವಾಸಿಗರೂ ಕೂಡಾ ತಮ್ಮ ಪ್ರೀತಿ ಪಾತ್ರರೊಂದಿಗೆ ತಮ್ಮ ಅಮೂಲ್ಯವಾದ ಸಮಯವನ್ನು ಕಳೆಯಲು ಹಳ್ಳಿಗೆ ಬರುತ್ತಾರೆ.

ದೇವತೆ ದುರ್ಗಾ ಮಾತೆಯ ಭಕ್ತರು  ಈ ಹಳ್ಳಿಯಲ್ಲಿರುವ ’ಭಗವತಿ’ ದೇವಾಲಯಕ್ಕೆ ಅಪಾರ ಸಂಖ್ಯೆಯಲ್ಲಿ ಕಿಕ್ಕಿರಿದು ಬರುತ್ತಾರೆ.

ಸುಂದರವಾಗಿ ನಿರ್ಮಾಣಗೊಂಡಿರುವ  ಚಿಕ್ಕದಾದ ಒಂದು ಪ್ರವೇಶ ದ್ವಾರದ ಮೂಲಕ ಹಳ್ಳಿಗೆ ಪ್ರವೇಶಿಸುವುದೇ ನಯನಮನೋಹರ. ಈ ದೇವಾಲಯವು ಒಂದು ಮಾಂತ್ರಿಕ ಶಕ್ತಿಯನ್ನು ಹೊಂದಿದ್ದು, ಬಕ್ತಾಧಿಗಳು ಪ್ರಾರ್ಥಿಸಿದ್ದನ್ನು ತಾಯಿ ಈಡೇರಿಸುತ್ತಾಳೆ ಎಂಬ ನಂಬಿಕೆಯಿದೆ.

ಈ ಹಳ್ಳಿಯಲ್ಲಿ ಚಿಕ್ಕದಾದ ಒಂದು ಅಣೆಕಟ್ಟನ್ನು ನಿರ್ಮಿಸಲಾಗಿದ್ದು ಅದನ್ನು ಅರುವಿಕರ ಎಂದು ಕರೆಯಲಾಗುತ್ತದೆ.ತಿರುವನಂತಪುರಂ ಹಾಗೂ ಇದರ ಸುತ್ತಮುತ್ತಲಿನ ಸಣ್ಣ ಸಣ್ಣ ಪ್ರದೇಶಗಳಿಗೆ ದಿನವೂ ನೀರನ್ನು ಒದಗಿಸುವುದಕ್ಕಾಗಿ ಈ ಅಣೆಕಟ್ಟನ್ನು ಕಟ್ಟಲಾಗಿದೆ.

ನಗರದಲ್ಲಿನ ಸಾಮಾನ್ಯ ಬವಣೆಯಾದ ಶಬ್ದ, ಗದ್ದಲವನ್ನು ಇಷ್ಟಪಡದವರು ತಮ್ಮ ಪ್ರವಾಸದ ಸಮಯದ ಸ್ವಲ್ಪ ಹೊತ್ತನ್ನಾದರೂ ಈ ಹಳ್ಳಿಗೆ ಭೇಟಿಕೊಡುವುದಕ್ಕಾಗಿ ಮೀಸಲಿಡಬೇಕು. ಮನಸ್ಸಿಗೆ ಸಾಕಷ್ಟು ನೆಮ್ಮದಿಯನ್ನು ನೀಡುವ ಇಂತಹ ಹಳ್ಳಿಗಳು ಇತ್ತೀಚಿಗೆ ಆಧುನಿಕರಣದಿಂದಾಗಿ ಅಪರೂಪವೆನ್ನಿಸಿ ಬಿಟ್ಟಿವೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed