Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಟ್ಟಾಯಂ » ಆಕರ್ಷಣೆಗಳು » ಪೂಂಜಾರು ಅರಮನೆ

ಪೂಂಜಾರು ಅರಮನೆ, ಕೊಟ್ಟಾಯಂ

1

ಕೊಟ್ಟಾಯಂ ಮತ್ತು ಪಾಲ-ಇರಾಟ್ಟುಪೇಟಂ ನಡುವಿನ ಪೂಂಜಾರ್ ಪ್ರದೇಶದಲ್ಲಿ ಪೂಂಜಾರ್ ಅರಮನೆ ಇದೆ. ಕೇರಳಾದ ಪಾರಂಪರೆಗೆ ಇದು ಜ್ವಲಂತ ಸಾಕ್ಷಿಯಾದ ಅರಮನೆಯಾಗಿದೆ. ರಾಜ ಮನೆತನದ ವಿಧವಿಧವಾದ ಪ್ರಾಚೀನ ವಸ್ತುಗಳನ್ನು ಇಲ್ಲಿನ ಕೋಣೆ ಕೋಣೆಗಳಲ್ಲೂ ಇಡಲಾಗಿದ್ದು ಸುಂದರವಾದ ಕಲಾಕೃತಿಗಳು ಹಾಗೂ ಅಲಂಕಾರಿಕ ದೀಪಗಳನ್ನು ಬಂಡೆಗಳಲ್ಲಿ ಕೆತ್ತಲಾಗಿದೆ. ಅಂದವಾದ ಪೀಠೋಪಕರಣಗಳು, ಚಿಕಿತ್ಸೆಗಾಗಿ ಮಾಡಿದ ಹಾಸಿಗೆ ಹಾಗೂ ಪಲ್ಲಂಗ ಕೂಡ ಇದೆ. ಒಂದೇ ಮರದಲ್ಲಿ ಚಿಕಿತ್ಸೆಗಾಗಿ ಮಂಚ ನಿರ್ಮಿಸಿರುವುದು ವಿಶೇಷವಾಗಿದೆ. ಮೋಂಬತ್ತಿ ಹಚ್ಚುವ ದೀಪಗಳ ಗೊಂಚಲು ಹಾಗೂ ಇತರ ವಿವಿಧ ಮಾದರಿಯ ಅಲಂಕಾರಿಕಾ ದೀಪಗಳು ಇಲ್ಲಿವೆ. ಆಭರಣಗಳ ಪೆಟ್ಟಿಗೆ, ಕಣಜಗಳು ಹಾಗೂ ತಾಳೆ ಎಲೆಯ ಮೇಲೆ ಚಿತ್ರಿಸಿರುವ ಚಿತ್ರಗಳು ಅರಮನೆಯ ಅಂದವನ್ನು ಹೆಚ್ಚಿಸಿದೆ. ಕಲ್ಲಿನ ಉತ್ತಮ ಕಲಾಕೃತಿಗಳು, ನಟರಾಜ ಶಿಲ್ಪ ಹಾಗೂ ಹಿಂದಿನ ಕಾಲದ ಶಸ್ತ್ರಾಸ್ತ್ರಗಳು ಇಲ್ಲಿವೆ.

ಇವೆಲ್ಲವುಗಳ ಜೊತೆಗೆ ಧಾರ್ಮಿಕ ವಿಧಿವಿಧಾನಗಳಿಗೆ ಬಳಸುವ ವಿಶೇಷವಾದ ದೊಡ್ಡ ಶಂಕಗಳು ಇಲ್ಲಿವೆ. ಪೂಂಜಾರ್ ಅರಮನೆಯಿಂದ ದೂರದ ಮದುರೈಯಲ್ಲಿರುವ ಮೀನಾಕ್ಷಿ ದೇವಾಲಯ ಸ್ಫುಟವಾಗಿ ಕಾಣುತ್ತದೆ. ಈ ದೇವಾಲಯದ ಕಂಬಗಳ ಮೇಲೆ ಪುರಾಣ ಕಥೆಗಳ ಚಿತ್ರ ಹಾಗೂ ಶಿಲ್ಪಕಲೆ ಅಂದವಾಗಿ ಕೆತ್ತಿರುವುದು ಕಂಡು ಬರುತ್ತದೆ. ಬಂಡೆ ಕಲ್ಲುಗಳ ಮೇಲೆ ಕೆತ್ತಿರುವ ದೀಪಗಳ ಸಾಲು ಅಥವಾ ಚುತ್ತುವಿಳಾಕ್ಕು ಈ ದೇವಾಲಯದ ವಿಶೇಷವಾಗಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu