ಇಟಗಿಯು ಯಲಬುರ್ಗಾ ತಾಲೂಕಿನಲ್ಲಿರುವ ಮತ್ತು ಕುಕನೂರು ಸಮೀಪದ ಸಣ್ಣ ಪಟ್ಟಣ. ಮಹದೇವ ದೇವಸ್ಥಾನಕ್ಕೆ ಇಟಗಿಯು ಜನಪ್ರಿಯ. ಇದನ್ನು ಚಾಲುಕ್ಯ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ಸ್ಥಳೀಯ ನಂಬಿಕೆಯ ಪ್ರಕಾರ ಮಹದೇವ ದೇವಸ್ಥಾನದ ತೀರ್ಥವು ಪವಿತ್ರವಾದದ್ದು. ಇಲ್ಲಿರುವ ಕನ್ನಡ ಶಿಲಾಶಾಸನಗಳು ಚಾಲುಕ್ಯ ರಾಜರ ಬಗ್ಗೆ ತಿಳಿಸುತ್ತವೆ. ಮಹದೇವ ದೇವಸ್ಥಾನದಲ್ಲಿ ಶಿವನಿಗೆ ಅರ್ಪಿಸಲಾದ ಲಿಂಗದ ಜೊತೆಗೆ ಸುಮಾರು 13 ಮೂರ್ತಿಗಳಿವೆ. ಈ ದೇವಸ್ಥಾನವನ್ನು ಸುಮಾರು 1112ರಲ್ಲಿ ಚಾಲುಕ್ಯರಿಂದ ನಿರ್ಮಿಸಲಾಗಿದೆ.ಲಕ್ಕುಂಡಿ ಮತ್ತು ಕುಕನೂರಿನಿಂದ ಇಟಗಿಗೆ ರಸ್ತೆ ಮತ್ತು ರೈಲು ಸಂಪರ್ಕ ಸೂಕ್ತವಾಗಿದೆ. ಕುಕನೂರಿನ ಸಮೀಪದ ಬನ್ನಿಕೊಪ್ಪ ರೈಲ್ವೇ ಸ್ಟೇಷನ್‌ನಲ್ಲಿ ನೀವು ಇಳಿದುಕೊಳ್ಳಬಹುದು. ಅಲ್ಲಿಂದ ಇಟಗಿಗೆ ಬಸ್ ಸೇವೆಯನ್ನು ಪಡೆಯಬಹುದು. ಕುಕನೂರಿನಿಂದ ಇಟಗಿಗೆ ಬಸ್ ಸೇವೆಗಳು ಸಾಕಷ್ಟಿದೆ. ಲಕ್ಕುಂಡಿಯಿಂದ ಕೇವಲ 20ಕಿ.ಮೀ ಇರುವುದರಿಂದ ಇಟಗಿಗೆ ತಲುಪಲು ಹೆಚ್ಚು ಸಮಯ ಅಗತ್ಯವಿಲ್ಲ. ಲಕ್ಕುಂಡಿಯಿಂದ ಇಟಗಿಗೆ ಹೆಚ್ಚೆಂದರೆ ಒಂದು ಗಂಟೆಯ ಪ್ರಯಾಣವಷ್ಟೇ.


Click it and Unblock the Notifications