Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಲ್ಲಿಮಲೈ » ಆಕರ್ಷಣೆಗಳು » ಸೇಕುಪರೈ ಹಾಗು ಸೆಲುರ್ ನಾಡು

ಸೇಕುಪರೈ ಹಾಗು ಸೆಲುರ್ ನಾಡು, ಕೊಲ್ಲಿಮಲೈ

1

ಕೊಲ್ಲಿಮಲೈಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ತಮಿಳುನಾಡು ಸರಕಾರವು ಸೇಕುಪರೈ ಹಾಗು ಸೆಲುರ್ ನಾಡುಗಳಲ್ಲಿ ಎರಡು ವೀಕ್ಷಣಾತಾಣಗಳನ್ನು ಅಭಿವೃದ್ಧಿಗೊಳಿಸಿದೆ. ಆದರೆ ಈ ತಾಣಗಳ ಬಗೆಗಿನ ತಿಳುವಳಿಕೆಯ ಕೊರತೆಯಿಂದ ವೀಕ್ಷಕರ ಬೇಟಿ ಅತಿವಿರಳವಾಗಿದೆ.ಅತ್ಯಂತ ಏಕಾಂತ ಸ್ಥಳಗಳಾಗಿರುವ ಸೇಕುಪರೈ ಹಾಗು ಸೆಲುರ್ ನಾಡುಗಳಲ್ಲಿನ ವೀಕ್ಷಣಾತಾಣಗಳು ಅದ್ಬುತ ವಿಶ್ರಾಂತಿ ತಾಣಗಳಾಗಿವೆ.  ಬೇಟಿಗರು ಇಲ್ಲಿ ಚಾರಣ, ದೋಣಿ ಸವಾರಿ, ಧ್ಯಾನ ಮೊದಲಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು. ಅಥವಾ ಸುಶ್ರಾವ್ಯವಾಗಿ ಬೀಸುವ ತಂಗಾಳಿಗೆ ಮೈಯೊಡ್ಡಿ, ಸುಂದರ ಪ್ರಕೃತಿಯನ್ನು ಕಣ್ಮನಗಳಲ್ಲಿ ತುಂಬಿಕೊಳ್ಳಲೂ ಬಹುದು. ಚಾರಣದ ವೇಳೆ ದಣಿವಾಗುವದರಿಂದ ಆರೋಗ್ಯ ಸಂಬಂಧೀ ತೊಂದರೆಗಳಿದ್ದವರು ಚಾರಣಗೈಯುವದು ಸೂಕ್ತವಲ್ಲ. ಅಲ್ಲದೆ ಇಲ್ಲಿ ನಮ್ಮ ನೀರಿನ ವ್ಯವಸ್ಥೆಯನ್ನು ನಾವೇ ಮಾಡಿಕೊಳ್ಳುವ ಅವಸ್ಯಕತೆ ಇದೆ. 2007 ರಲ್ಲಿ ಒಂದು ಉದ್ಯಾನವನ ಹಾಗು ಸೇಕುಪರೈಯನ್ನು ತಲುಪಲು ರಸ್ತೆಯೊಂದನ್ನು ನಿರ್ಮಿಸಲು ಪ್ರಾರಂಭಿಸಿತ್ತು. ಅದು ಈಗ ಪೂರ್ಣಗೊಳ್ಳುವುದರಲ್ಲಿದೆ.  

ಸರ್ಕಾರವು ಇಲ್ಲಿ ಅನಾನಸ್ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಿದೆ. ಇಲ್ಲಿ ಅನೇಕ ತಳಿಗಳ ಹೈಬ್ರೀಡ್ ಅನಾನಸ್ ಗಳನ್ನು ಸಂಶೋಧಿಸಿ, ರಕ್ಷಿಸಲಾಗುತ್ತದೆ. ಇದಲ್ಲದೇ ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಔಷಧೀ ಸಸ್ಯಗಳ ಸಂಶೋಧನೆಯೂ ನಡೆಯುತ್ತಿದೆ.ಈ ತಾಣವು ಬೇಟಿಗೆ ತುಂಬಾ ಯೋಗ್ಯವಾಗಿದೆ. ಸರ್ಕಾರವು ಪ್ರತೀ ವರ್ಷ ಅಗಸ್ಟ್ ನಲ್ಲಿ ಪ್ರವಾಸೋದ್ಯಮ ಉತ್ಸವವನ್ನು ಹಮ್ಮಿಕೊಳ್ಳುತ್ತದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat