ಸ್ಪುವಾ ಎಂದೂ ಕೂಡ ಕರೆಯಲ್ಪಡುವ ಪೂ ಕಿನ್ನೌರ್ ನ ಪ್ರಸಿದ್ಧ ಗ್ರಾಮ. ಇದು ಸಮುದ್ರ ಮಟ್ಟದಿಂದ 2823 ಮೀಟರ್ ಎತ್ತರದಲ್ಲಿದೆ. ರಾ.ಹೆ. 22 ರಲ್ಲಿ ಕ್ರಮಿಸಿದರೆ ಪೋವಾರಿನಿಂದ 58 ಕಿ ಮೀ ದೂರದಲ್ಲಿ ಪೂ ಗ್ರಾಮವಿದೆ. ಬಾದಾಮಿ, ದ್ರಾಕ್ಷಿ ಮತ್ತು ಚಹಾ, ಹಸಿರು ಹುಲ್ಲುಗಾವಲುಗಳು ಇಲ್ಲಿನ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಇಲ್ಲಿನ ಪ್ರಧಾನ ಆಕರ್ಷಣೆಗಳಲ್ಲಿ ಲಾರ್ಡ್ ಬುದ್ಧ ಅಥವಾ ಸಾಖ್ಯಮುನಿಗೆ ಮಿಸಲಾಗಿರುವ ಒಂದು ಬೌದ್ಧ ದೇವಾಲಯ ಕೂಡಾ ಒಂದು. ದಬ್ಲಾ ಇಲ್ಲಿಯ ಸ್ಥಾನ ದೇವತೆ. ಕಂಬವೊಂದರ ಮೇಲೆ ಸ್ಥಾಪಿತವಾಗಿರುವ ಈ ಮೂರ್ತಿಯನ್ನು ಬಣ್ಣದ ವಸ್ತ್ರ ಹಾಗೂ ಯಾಕ್ ನ ಬಾಲದ ಕೂದಲುಗಳಿಂದ ಅಲಂಕಾರ ಮಾಡಲಾಗಿದೆ.


Click it and Unblock the Notifications