ಸಮುದ್ರ ಮಟ್ಟದಿಂದ 8770 ಅಡಿ ಎತ್ತರದಲ್ಲಿರುವ ಖಾರಾ ಪತ್ಥರ್ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಮೊಟ್ಟೆಯ ಆಕಾರವುಳ್ಳ ನೈಸರ್ಗಿಕ ಬಂಡೆಗಳು ಇಲ್ಲಿನ ಮುಖ್ಯ ಆಕರ್ಷಣೆ. ಸಮೃದ್ಧ ಹಸಿರು ಸೇಬು ಹಣ್ಣಿನ ತೊಟಗಳು ಮತ್ತು ಪೇನ್ ಮತ್ತು ದೇವದಾರು ಕಾಡುಗಳನ್ನು ಒಳಗೊಂಡ ಸುಂದರ ಇಳಿಜಾರುಗಳು ಮನಸಿಗೆ ಮುದ ನೀಡುತ್ತವೆ. ಈ ಕಾಡುಗಳಲ್ಲಿ ಟ್ರಾಲಿ ಮತ್ತು ಕಾಲ್ನಡಿಗೆಯಲ್ಲಿ ಸುತ್ತಾಡುವ ಅವಕಾಶವಿದೆ. ಇಲ್ಲಿಂದ ಏಳು ಕಿಲೋಮೀಟರ್ ದೂರದಲ್ಲಿರುವ ಗಿರಿ ಗಂಗ್ರಾ ದೇವಸ್ಥಾನದವರೆಗೆ ಜೀಪ್ ಸಫಾರಿಗೂ ಅವಕಾಶ ಕಲ್ಪಿಸಲಾಗಿದ್ದು, ಪ್ರವಾಸಿಗರಿಗೆ ಅನುಕೂಲವಾಗಿದೆ.


Click it and Unblock the Notifications