ಫ್ರೆಂಚ್ ವಾಸ್ತುಶಿಲ್ಪ ಮಾದರಿಯಲ್ಲಿ ವಿನ್ಯಾಸ ಮಾಡಿದ ಜುಬ್ಬಲ್ ಅರಮನೆ ಆಕರ್ಷಕ ಮತ್ತು ಐತಿಹಾಸಿಕ ಪ್ರವಾಸಿ ತಾಣವಾಗಿದೆ. ಇದನ್ನು 'ರಾಣಾನ ನೆಲೆ' ಎಂದೂ ಕೂಡ ಕರೆಯಲಾಗುತ್ತಿದ್ದು, ಚೀನೀ ವಾಸ್ತುಶಿಲ್ಪದ ಮಾದರಿಗಳನ್ನೂ ಇಲ್ಲಿ ಕಾಣಬಹುದಾಗಿದೆ. ಮರಳುಗಲ್ಲಿನಿಂದ ನಿರ್ಮಿಸಲಾಗಿರುವ ಇದರ ತಳಪಾಯ ಗಮನಸೆಳೆದು ಅಚ್ಚರಿ ಮೂಡಿಸುತ್ತದೆ.
ಅರಮನೆಯ ಅರ್ಧಕ್ಕಿಂತಲೂ ಹೆಚ್ಚಿನ ಭಾಗವನ್ನು ದೇವದಾರು ಮರದಿಂದ ನಿರ್ಮಿಸಲಾಗಿದೆ.18 ಅಡಿ ಎತ್ತರದ ದೈತ್ಯ ಮರದ ಬಾಗಿಲು ಮುಖ್ಯ ಪ್ರವೇಶ ದ್ವಾರವಾಗಿ ಗಮನ ಸೆಳೆಯುತ್ತದೆ. ಅರಮನೆಯ ಇತರ ಭಾಗಗಳು ಕೂಡ ಆಕರ್ಷಕವಾಗಿದೆ. ಸಂಸ್ಕೃತ ಮತ್ತು ಪರ್ಷಿಯನ್ ಪುಸ್ತಕಗಳ ಅಗಾಧ ಸಂಗ್ರಹವಿರುವ ಶ್ರೀಮಂತ ಗ್ರಂಥಾಲಯ ಇಲ್ಲಿನ ವಿಶೇಷ. ನವೀಕರಣಗೊಂಡ ಅರಮನೆಯ ಕೆಲವು ಭಾಗಗಳಲ್ಲಿ ಇಂಡೊ-ಯುರೋಪಿಯನ್ ಶೈಲಿಯ ಸಮ್ಮಿಲನವನ್ನು ಕಾಣಬಹುದಾಗಿದೆ. ಈ ಅರಮನೆಯಲ್ಲಿ ರಾಜಮನೆತನದವರು ಉಪಯೋಗಿಸುತ್ತಿದ್ದ ಪ್ರಾಚೀನ ವಸ್ತುಗಳ ಪ್ರದರ್ಶನವೂ ನಡೆಯುತ್ತದೆ.