ಜುಬ್ಬಲ್ ನ ದೇವಾಲಯಗಳ ಪೈಕಿ ಹತ್ಕೇಶ್ವರಿ ದೇವಸ್ಥಾನ ತನ್ನದೇ ಆದ ವಿಶೇಷತೆಗಳಿಂದ ಗಮನ ಸೆಳೆಯುತ್ತದೆ. ಒಂದೆಡೆ ಪಾಂಡವರು ಈ ದೇವಸ್ಥಾನವನ್ನು ನಿರ್ಮಿಸಿದರು ಎನ್ನುವ ದಂತ ಕಥೆಯಿದ್ದರೆ, ಇನ್ನೊಂದೆಡೆ ಕ್ರಿ.ಶ. 800 ರಿಂದ 1000 ನೇ ಇಸ್ವಿಯ ನಡುವಿನ ಅವಧಿಯಲ್ಲಿ ಇದರ ನಿರ್ಮಾಣವಾಯಿತು ಅನ್ನುವ ತಜ್ಞರ ಅಭಿಪ್ರಾಯಗಳ ನಡುವೆ ದೇವಸ್ಥಾನ ಅಪೂರ್ವ ಅನುಭವ ನೀಡುತ್ತದೆ. 19 ನೇ ಶತಮಾನದಲ್ಲಿ ಜುಬ್ಬಲ್ ಅನ್ನು ಆಳುತ್ತಿದ್ದ ರಾಜರು ಈ ದೇವಾಲಯವನ್ನು ನವೀಕರಣಗೊಳಿಸಿದರು ಎಂಬ ಐತಿಹಾಸಿಕ ದಾಖಲೆಗಳೂ ಇವೆ.
ಇದು ಗೋಪುರ ಮಾದರಿಯ ರಚನೆಯನ್ನು ಹೊಂದಿದ್ದು, ಮುಖ್ಯವಾಗಿ ಹತ್ಕೇಶ್ವರಿ ದೇವಿಗೆ ಮೀಸಲಾದ ದೇವಾಲಯವಾಗಿದೆ, ಇದರ ಜತೆಯಲ್ಲಿಯೇ ಇನ್ನೂ ಐದು ವಿವಿಧ ದೇವರುಗಳ ಮೂರ್ತಿಯನ್ನೂ ಪ್ರತಿಷ್ಠಾಪಿಸಲಾಗಿದ್ದು, ಅವುಗಳ ಆರಾಧನೆ ನಡೆಯುತ್ತದೆ. ಪ್ರತಿದಿನ ಸಂಜೆ ವಿಶೇಷ ಆರತಿ ನಡೆಯುತ್ತಿದ್ದು ಸ್ಥಳೀಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.


Click it and Unblock the Notifications