ಆಚಾರ್ಯ ಜಗದೀಶ್ ಚಂದ್ರ ಬೋಸ್ ಇಂಡಿಯನ್ ಬಟಾನಿಕಲ್ ಗಾರ್ಡನ್ ಎಂದು ಕರೆಯಲ್ಪಡುವ ಇಂಡಿಯನ್ ಬಟಾನಿಕಲ್ ಗಾರ್ಡನ್ ಹೌರಾ ನಗರದ ಮಧ್ಯಭಾಗದಿಂದ ದೂರವಿಲ್ಲ. ಇದು ಸುಮಾರು 100 ಹೆಕ್ಟರ್ ಗಳಿಗಿಂತಲೂ ಹೆಚ್ಚಿನ ಸ್ಥಳಕ್ಕೆ ವ್ಯಾಪಿಸಿದ್ದು 12000 ಕ್ಕೂ ಹೆಚ್ಚಿನ ತರಹದ ಅಪೂರ್ವ ಸಸ್ಯರಾಶಿಗಳಿಗೆ ಆಶ್ರಯ ನೀಡುತ್ತದೆ.
ಈ ಪಾರ್ಕ್ ಅನ್ನು ಬ್ರಿಟಿಷ್ ಸೇನೆಯ ಮುಖ್ಯಸ್ಥ 1700 ರ ಸಮಯದಲ್ಲಿ ಉದ್ಘಾಟಿಸಿದ್ದರು. ಇಲ್ಲಿ ಹಲವು ಬಗೆಯ ಹೊಸ ಪ್ರಯೋಗಗಳನ್ನು ನಡೆಸುತ್ತಾ ವಿಜ್ಞಾನಿಗಳು ಯಾವಾಗಲೂ ಕಾರ್ಯನಿರತರಾಗಿರುತ್ತಾರೆ. ಈ ಉದ್ಯಾನವನ ಸಂಜೆಯ ಹೊತ್ತನ್ನು ಕಳೆಯಲು ಸೂಕ್ತವಾಗಿದ್ದು, ಕೆಲವು ಹೊಸ ವಿಷಯಗಳನ್ನೂ ಕಲಿಯಬಹುದು.


Click it and Unblock the Notifications