ಹೆಮಿಸ್ ಹೈ ಆಲ್ಟಿಟ್ಯೂಡ್ ನ್ಯಾಷನಲ್ ಪಾರ್ಕ್ ಇಂಡಸ್ ನದಿಯ ದಂಡೆಯ ಮೇಲೆ ಸಮುದ್ರ ಮಟ್ಟದಿಂದ 3300 ರಿಂದ 6000 ಮೀಟರ್ ಎತ್ತರದಲ್ಲಿದೆ. ಹೆಮಿಸ್ ಆಶ್ರಮದಿಂದಾಗಿ ಈ ಉದ್ಯಾನಕ್ಕೆ ಈ ಹೆಸರು ಬಂದಿದೆ.
1981ರಲ್ಲಿ 600ಸ್ಕ್ವೇರ್ ಕಿಮೀ ವ್ಯಾಪ್ತಿಯ ಪ್ರದೇಶವು ರಾಷ್ಟ್ರೀಯ ಉದ್ಯಾನವನವಾಗಿ ಘೋಷಿಸಲ್ಪಟ್ಟಿತು. 1988 ರಲ್ಲಿ ಈ ಪ್ರದೇಶದ ವ್ಯಾಪ್ತಿಯನ್ನು 3350ಸ್ಕ್ವೇರ್ ಕಿಮೀ ಗೆ ಹೆಚ್ಚಿಸಿ, ಕೊನೆಯಲ್ಲಿ 1990 ರಲ್ಲಿ 4400ಸ್ಕ್ವೇರ್ ಕಿಮೀ ನಷ್ಟು ವಿಸ್ತಾರವಾಗಿ ರೂಪಗೊಂಡಿತು.
ದಕ್ಷಿಣ ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ನ್ಯಾಷನಲ್ ಪಾರ್ಕ್ ಎಂದು ಇದನ್ನು ಘೋಷಿಸಲಾಗಿದೆ. ಅಲ್ಲದೆ ನಂದಾದೇವಿ ಬಯೊಸ್ಫೀಯರ್ ಪಾರ್ಕ ನಂತರದಲ್ಲಿರುವ ಎರಡನೇಯ ದೊಡ್ಡ ಪಾರ್ಕ್ ಎಂದೂ ಕೂಡ ಇದು ಘೋಷಿಸಲ್ಪಟ್ಟಿದೆ. ಅತ್ಯಂತ ಅಪರೂಪದ ಪ್ರಾಣಿ ಪಕ್ಷಿಗಳು, ಸಸ್ಯ ಸಂಪತ್ತು ಇಲ್ಲಿವೆ. ಹಿಮ ಚಿರತೆ, ಜಿಂಕೆ, ಕೆಂಪುತೋಳ, ಗೂಬೆಗಳು, ರಣಹದ್ದು ಮತ್ತು ಬಂಗಾರದ ಹದ್ದುಗಳನ್ನು ಇಲ್ಲಿ ಕಾಣಬಹುದು.
ಹೆಮಿಸ್ ಕಾಡಿನಲ್ಲಿ 70 ವಿಧಧ ಪಕ್ಷಿಗಳು ಮತ್ತು 16 ಬಗೆಯ ತಳಿಯ ಸಸ್ತನಿಗಳಿವೆ. ವರ್ಷದ ಯಾವುದೇ ಸಮಯದಲ್ಲಿ ಬೇಕಾದರೂ ಹೆಮಿಸ್ ನ್ಯಾಷನಲ್ ಪಾರ್ಕಗೆ ಭೇಟಿ ನೀಡಬಹುದು.


Click it and Unblock the Notifications