Search
  • Follow NativePlanet
Share
ಮುಖಪುಟ » ಸ್ಥಳಗಳು » ಗುಹಾಘರ್ » ಆಕರ್ಷಣೆಗಳು » ಹೆಡ್ವಿ

ಹೆಡ್ವಿ, ಗುಹಾಘರ್

2

ಹೆಡ್ವಿ ಗುಹಾಘರ್ ಸಮೀಪದಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದ್ದು ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿದೆ.

ಈ ಹಳ್ಳಿಯು ಇಲ್ಲಿರುವ ಗಣಪತಿ ದೇವಾಲಯ ಹಾಗೂ ಶ್ರೀ ದಶಭುಜ ಲಕ್ಷ್ಮೀ ಗಣೇಶ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ದಶಭುಜ ಗಣಪತಿ ದೇವಸ್ಥಾನ ಇಲ್ಲಿನ ಮೂರ್ತಿಯಿಂದಾಗಿ ಪ್ರಸಿದ್ಧವಾಗಿದೆ. ಇಲ್ಲಿರುವ ಗಣಪತಿ ಮೂರ್ತಿ ಹತ್ತು ಕೈಗಳನ್ನು ಹೊಂದಿದೆ ಇದಕ್ಕಾಗಿ ಹಿಂದಿ ಭಾಷೆಯಲ್ಲಿ ದಶಭುಜ್ ಗಣಪತಿ ಎನ್ನುತ್ತಾರೆ.

ಈ ದೇವಾಲಯವನ್ನು ಪೇಶ್ವೆಗಳ ಕಾಲದಲ್ಲಿ ಕಟ್ಟಲಾಗಿದೆ ಎಂದು ನಂಬಲಾಗಿದೆ ಹಾಗೂ ಇಲ್ಲಿನ ಗಣೇಶ ವಿಗ್ರಹವನ್ನು ತಯಾರಿಸಲು ಬಳಸಲಾದ ಅಮೃತಶಿಲೆಯನ್ನು ಜಮ್ಮು ಮತ್ತು ಕಾಶ್ಮೀರದಿಂದ ತರಲಾಗಿದೆ ಎಂಬ ಪ್ರತೀತಿ ಇದೆ.

ಹೆಡ್ವಿ, ಉಮಾ ಮಹೇಶ್ವರಿ ದೇವಾಲಯ ಮತ್ತು ಬ್ರಾಹ್ಮಣ್ ಘಾಲ್ ಗೂ ಕೂಡ ಪ್ರಸಿದ್ಧವಾಗಿದೆ. ಬ್ರಾಹ್ಮಣ್ ಘಾಲ್ ಒಂದು ನೈಸರ್ಗಿಕವಾದ ಕಮರಿ (ಆಳವಾದ ಹಳ್ಳ)ಯಾಗಿದ್ದು ಇದು 35 ಅಡಿ ಉದ್ದ ಹಾಗೂ 20 ಅಡಿ ಆಳವಾಗಿದೆ. ಕಮರಿ ಕಪ್ಪು ಬಂಡೆಯಲ್ಲಿದ್ದು ಎರಡು ಅಡಿ ಅಗಲವಾಗಿದೆ. ಈ ಕಮರಿಯು, ಸಮುದ್ರದ ಅಲೆಗಳು ಬಂದು ಸ್ಪರ್ಶಿಸಿದ ಸಮಯದಲ್ಲಿ ಹಾಲಿನಂತಹ ನೊರೆಯನ್ನು ಉಕ್ಕಿಸುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed