ಭುವನೇಶ್ವರದ ಬಿಜು ಪಟ್ನಾಯಕ್ ವಿಮಾನ ನಿಲ್ದಾಣ, ಗೋಪಾಲಪುರ ತಲುಪಲು ಹತ್ತಿರದ ವಿಮಾನ ನಿಲ್ದಾಣವಾಗಿದೆ. ರಾಜ್ಯದ ರಾಜಧಾನಿಯಿಂದ 180 ಕಿ. ಮೀ ದೂರದಲ್ಲಿದ್ದು, ವಿಮಾನ ನಿಲ್ದಾಣದಿಂದ ಖಾಸಗಿ ಕಾರು ನೇಮಕ ಮಾಡಿಕೊಂಡು ಗೋಪಾಲಪುರವನ್ನು ತಲುಪಬಹುದು. ಬಿಜು ಪಟ್ನಾಯಕ್ ವಿಮಾನ ನಿಲ್ದಾಣ ಭಾರತದ ಇತರ ಪ್ರಮುಖ ನಗರಗಳಿಗೂ ಸಂಪರ್ಕ ಕಲ್ಪಿಸುತ್ತದೆ.