ಕಾಳಿಕಾ ದೇವಾಲಯವು ಗಿರ್ನಾರ್ ತಪ್ಪಲಿನಲ್ಲಿರುವ ’ಪಾವಘರ್’ ಎನ್ನುವ ಶಿಖರದ ತುದಿಯಲ್ಲಿದೆ. ಇದು ಹಿಂದೂ ಮುಸ್ಲಿಂ ಯಾತ್ರಾರ್ಥಿಗಳ ಪ್ರಮುಖ ಯಾತ್ರಾಸ್ಥಳ. ಕಾಳಿ ಮಾತೆಯು ಇಲ್ಲಿನ ದೇವತೆಯಾಗಿದ್ದು, ಇಲ್ಲಿರುವ ವಿಗ್ರಹವು ಬಹಳ ವಿಶೇಷವಾಗಿದೆ. ವಿಗ್ರ್ಹಹವು ನಾಲ್ಕು ಕೈಗಳನ್ನು ಹೊಂದಿದ್ದು, ಒಂದು ಕೈಯಲ್ಲಿ ಖಡ್ಗ, ಇನ್ನೊಂದು ಕೈಯ್ಯಲ್ಲಿ ದುಷ್ಟ ರಾಕ್ಷಸನ ರುಂಡ, ಮತ್ತು ಎರಡು ಕೈಗಳು ಆಶೀರ್ವಾದ ನೀಡುವ ಭಂಗಿಯಲ್ಲಿವೆ. ತಾಯಿ ಕಾಳಿ ಮಾತೆಯು ಕೇಳಿದ್ದನ್ನು ಈಡೇರಿಸುತ್ತಾಳೆ ಅನ್ನುವ ನಂಬಿಕೆ ಇಲ್ಲಿಗೆ ಆಗಮಿಸುವಂತಹ ಪ್ರತಿಯೊಬ್ಬ ಭಕ್ತನದ್ದು. ಹೀಗಾಗಿ ವರ್ಷಪೂರ್ತಿ ಯಾತ್ರಾರ್ಥಿಗಳು ಇಲ್ಲಿಗೆ ಬಂದು ದೇವಿಯ ದರ್ಶನ ಪಡೆಯುತ್ತಾರೆ.


Click it and Unblock the Notifications