Search
  • Follow NativePlanet
Share

ಝೊಂಗು- ಲೆಪ್ಚಾಗಳ ಭೂಮಿ

6

ಝೊಂಗು ಉತ್ತರ ಸಿಕ್ಕಿಂನಲ್ಲಿದೆ. ಸಿಕ್ಕಿಂನ ಮೂಲನಿವಾಸಿಗಳಾದ ಲೆಪ್ಚಾಗಳ ಪ್ರದೇಶವಿದು. ಇದು ಪ್ರಾಕೃತಿಕ ಸೌಂದರ್ಯದ ತವರಾದ ಗ್ಯಾಂಗ್ಟಾಕ್ನಿಂದ 70 ಕಿಮೀ ದೂರದಲ್ಲಿದೆ. ಇಲ್ಲಿ ಅನೇಕ ವಿಧದ ಸಸ್ಯಸಿರಿಯನ್ನು ಮತ್ತು ಜೀವ ವೈವಿಧ್ಯವನ್ನು ಕಾಣಬಹುದಾಗಿದೆ.

ಝೊಂಗುವಿಗೆ ಹೋದಾಗ ಅಲ್ಲಿನ ಜನರೊಂದಿಗೆ ಸಮಯ ಕಳೆಯಿರಿ.

ಲೆಪ್ಚಾಗಳು ಝೊಂಗು ಪ್ರದೇಶದ ವಿಶೇಷತೆ. ಈ ಸಮುದಾಯದ ಮಂದಿ ಏಕಾಂತದಲ್ಲಿ ಇರುವುದನ್ನು ಇಷ್ಟಪಡುತ್ತಾರೆ. ಆದ್ದರಿಂದಲೇ ಹೊರಗಿನ ಪ್ರಪಂಚದಿಂದ ದೂರ ಉಳಿದಿದ್ದಾರೆ. ಇಲ್ಲಿ ನೀವು ಹೋಂಸ್ಟೇ ಮಾಡಿದರೆ ಇವರೊಂದಿಗೆ ಕಾಲ ಕಳೆಯಬಹುದು. ಇದರಿಂದ ಲೆಪ್ಚಾಗಳ ಜೀವನ ಶೈಲಿ, ಸಂಪ್ರದಾಯ ಮತ್ತು ಸಂಸ್ಕೃತಿಯ ಪರಿಚಯವಾಗುತ್ತದೆ. ಇಲ್ಲಿಗೆ ಭೇಟಿ ನೀಡಿದಾಗ ಲೆಪ್ಚಾಗಳ ಸಾಂಪ್ರದಾಯಿಕ ಪಾನೀಯದ ರುಚಿ ನೋಡಲು ಮರೆಯದಿರಿ.

ಭೂಪ್ರದೇಶ

ಝೊಂಗು ಸಮುದ್ರ ಮಟ್ಟದಿಂದ 3000-20,000 ಅಡಿ ಎತ್ತರದಲ್ಲಿದೆ. ಕಂಚನಜುಂಗಾ ಇದರ ಪಕ್ಕದಲ್ಲಿದ್ದು ಈ ಪ್ರದೇಶದಿಂದ ಕಂಚನಜುಂಗಾದ ಕೆಲವು ರಮಣೀಯ ನೋಟಗಳನ್ನು ನೋಡಬಹುದು.

ನೋಡಬೇಕಾದ ಪ್ರೇಕ್ಷಣೀಯ ಸ್ಥಳಗಳು

ನೀವು ಝೊಂಗಗಾಗೆ ಭೇಟಿ ನೀಡಿದಾಗ ಈ ಪ್ರದೇಶಗಳನ್ನು ತಪ್ಪದೇ ನೋಡಿ ಬನ್ನಿ: ಏಳು ಸೋದರಿಯರ ಜಲಪಾತ- ಹಳ್ಳಿಯ ಏಲಕ್ಕಿ ತೋಟಗಳ ನಡುವಿನ ದಾರಿಯಲ್ಲಿ ಸಾಗಿ ಎತ್ತರದಲ್ಲಿ ನಿಂತು ಈ ನಯನಮನೋಹರ ಜಲಪಾತವನ್ನು ನೋಡಿ. ಪಾಸಿಂಗ್ಡನ್ನ ಹತ್ತಿರ ಬಿದಿರಿನ ಸೇತುವೆಯ ಕೆಳಗೆ ಹರಿಯುತ್ತಿರುವ ತೀಸ್ತಾ ನದಿಯ ಹತ್ತಿರ ವಿಶ್ರಮಿಸಿಕೊಳ್ಳಿ. ಇಲ್ಲಿ ಲೆಪ್ಚಾಗಳು ಸ್ಥಳೀಯವಾಗಿ ಸಿಗುವ ಔಷದೀಯ ಗಿಡಮೂಲಿಕೆಗಳನ್ನು ಬಳಸಿ ಜನರಿಗೆ ಶುಶ್ರುಷೆ ಮಾಡುವುದನ್ನು ನೋಡಲು ಮರೆಯದಿರಿ. ಇವು ನಿಮ್ಮ ಸಿಕ್ಕಿಂ ಪ್ರವಾಸವನ್ನು ಸ್ಮರಣೀಯವಾಗಿಸುತ್ತದೆ.

ಝೊಂಗು ಪ್ರಸಿದ್ಧವಾಗಿದೆ

ಝೊಂಗು ಹವಾಮಾನ

ಉತ್ತಮ ಸಮಯ ಝೊಂಗು

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಝೊಂಗು

  • ರಸ್ತೆಯ ಮೂಲಕ
    ಗ್ಯಾಂಗ್ಟಾಕ್ನಿಂದ 70 ಕಿಮೀ ದೂರದಲ್ಲಿರುವ ಝೊಂಗುವನ್ನು ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು. ಗ್ಯಾಂಗ್ಟಾಕ್ನಿಂದ ಇಲ್ಲಿಗೆ ಉತ್ತಮ ಬಸ್ ಸೌಲಭ್ಯವಿದೆ. ಇಲ್ಲಿ ಪ್ರೈವೇಟ್ ಟ್ಯಾಕ್ಸಿಗಳಿವೆ ಮತ್ತು ಪ್ರಯಾಣಿಕರು ಇವುಗಳನ್ನು ಶೇರ್ ಟ್ಯಾಕ್ಸಿಯಾಗಿ ಬಳಸಬಹುದು. ಹೇಗೇ ಬಂದರೂ ಕೂಡ ಝೊಂಗು ಪ್ರವೇಶಕ್ಕೆ ಸಿಕ್ಕಿಂ ಸರ್ಕಾರದ ಅನುಮತಿಯನ್ನು ಪಡೆದಿರಬೇಕು. ಇದನ್ನು ಗ್ಯಾಂಗ್ಟಾಕ್ ಅಥವ ದೆಹಲಿಯ ಪ್ರವಾಸೋದ್ಯಮ ಕಛೇರಿಯಲ್ಲಿ ಪಡೆದುಕೊಳ್ಳಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಝೊಂಗುವಿಗೆ ಹತ್ತಿರದ ರೈಲ್ವೇ ನಿಲ್ದಾಣವೆಂದರೆ ಜಲ್ಪೈಗುಡಿಯ ಹೊಸ ರೈಲು ನಿಲ್ದಾಣ. ಇಲ್ಲಿಂದ ಗ್ಯಾಂಗ್ಟಾಕ್ ಮೂಲಕ ಪ್ರವಾಸಿಗರು ಝೊಂಗುವನ್ನು ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಝೊಂಗುವಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಪಶ್ಚಿಮ ಬಂಗಾಳದ ಬಾಗ್ಡೋಗ್ರಾ. ಇಲ್ಲಿಂದ ಗ್ಯಾಂಗ್ಟಾಕ್ ಅಥವ ಸಿಂಗ್ಥೇಮ್ ಮೂಲಕ ಟ್ಯಾಕ್ಸಿಯಲ್ಲಿ ಝೊಂಗುವಿಗೆ 5 ಗಂಟೆಗಳಲ್ಲಿ ತಲುಪಬಹುದು. ಗೋ ಏರ್, ಇಂಡಿಯನ್ ಏರ್ಲೈನ್ಸ್ ಮತ್ತು ಜೆಟ್ ವಿಮಾನಗಳು ಬಾಗ್ಡೋಗ್ರಾ ವಿಮಾನ ನಿಲ್ದಾಣಕ್ಕೆ ಬರುತ್ತವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat