Search
  • Follow NativePlanet
Share
ಮುಖಪುಟ » ಸ್ಥಳಗಳು» ಧರಮಗಡ್

ಧರಮಗಡ್ - ಪ್ರಕೃತಿ ಮತ್ತು ಕಲೆಗಳು ಕೈಜೋಡಿಸುವ ತಾಣ

17

ಧರಮಗಡವು ಒಡಿಶಾ ರಾಜ್ಯದ, ಕಲಾಹಂಡಿ ಜಿಲ್ಲೆಯ ಕೇಂದ್ರ ಕಾರ್ಯಸ್ಥಾನದ ಉಪವಿಭಾಗವಾಗಿದ್ದು, ಇದು ಕಲಾಹoಡಿಯ ಕಣಜ ಎಂಬುದಾಗಿಯೂ ಕೂಡ ಸಾಮಾನ್ಯವಾಗಿ ಕರೆಯಲ್ಪಡುತ್ತದೆ.  ಧರಮಗಡವು ಒಡಿಶಾ ರಾಜ್ಯದ ಅಗ್ರಸ್ಥಾನದಲ್ಲಿರುವ ಭತ್ತದ ಉತ್ಪಾದನೆಯ ಕೇಂದ್ರಗಳಲ್ಲಿ ಒಂದಾಗಿದೆ.  ಧರಮಗಡವು, ತನ್ನಲ್ಲಿ ಹಾಗೂ ತನ್ನ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ವಿವಿಧ ಪುರಾತನ ಮತ್ತು ಕೆಲವೊಂದು ಅದ್ವಿತೀಯ ದೇವಸ್ಥಾನಗಳ ಕಾರಣದಿಂದ ಕೀರ್ತಿ ಗಳಿಸಿದೆ.  

ಧರಮಗಡದ ಪ್ರವಾಸೋದ್ಯಮವು ತನ್ನಲ್ಲಿ ಹುದುಗಿರುವ  ಪ್ರಾಕೃತಿಕ ವೈಭವಗಳಾದ ಭವ್ಯವಾದ ಬೆಟ್ಟಗಳು, ಮೆಟ್ಟಿಲುಗಳಿಂದ ಇಳಿಯುವ ರೀತಿಯಲ್ಲಿರುವ ಜಲಪಾತಗಳು, ವನ್ಯ ಜಂತುಗಳ ಕಲರವವನ್ನೊಳಗೊಂಡ ದಟ್ಟವಾದ ಕಾಡುಗಳು, ಮತ್ತು ಇದಕ್ಕೆ ವಿಭಿನ್ನವಾದಂತಹ ವಿಶಾಲವಾದ ಹುಲ್ಲುಗಾವಲುಗಳು ಇವೇ ಮೊದಲಾದವುಗಳನ್ನು ಸಾಕ್ಷೀಭೂತವಾಗಿಸಲು ಅನೇಕ ಜನರನ್ನು ತನ್ನೆಡೆಗೆ ಆಕರ್ಷಿಸುತ್ತದೆ.

ಧರಮಗಡದಲ್ಲಿ ಮತ್ತು ಅದರ ಸುತ್ತಮುತ್ತಲೂ ಇರುವ ಪ್ರವಾಸೀ ತಾಣಗಳು

ಧರಮಗಡವು ಶ್ರೀ ಆರೋಬಿಂದೋ ಮತ್ತು ಶ್ರೀ ಮಾ ಇವರುಗಳ ಪವಿತ್ರವಾದ ಅವಶೇಷಗಳ ತವರೂರು ಕೂಡ ಆಗಿದೆ.  ಈ ಪವಿತ್ರವಾದ ಕೇಂದ್ರದ ದೈವಿಕತೆಯನ್ನು ಅನುಭವಿಸಲು ಬರುವ ಅಸಂಖ್ಯಾತ ಪ್ರವಾಸಿಗರು ಧರಮಗಡದ ಪ್ರವಾಸೋದ್ಯಮದಲ್ಲಿ ಕಂಡುಬರುತ್ತಾರೆ.  ಅಂಪನಿ ಮತ್ತು ದೊಖರಿ ಚಂಚ್ರಾ ದಲ್ಲಿರುವ ಮಹೋನ್ನತವಾದ ಜಲಪಾತಗಳು ಧರಮಗಡದ ಸೌಂದರ್ಯಕ್ಕೆ ತಮ್ಮ ಕಾಣ್ಕೆಯನ್ನು ಸಲ್ಲಿಸಿವೆ. ಜುನಾಗಡ್ ಪಟ್ಟಣವು ಕೆಲವು ಪುರಾತನ ದೇವಾಲಯಗಳಾದ ಲಂಕೇಶ್ವರಿ, ಕನಕ್ ದುರ್ಗಾ, ಮತ್ತು ಇನ್ನೂ ಅನೇಕ ದೇವಾಲಯಗಳನ್ನು ಹೊಂದಿದೆ.

ಗುಡಹಂಡಿಯು ವಿಫುಲವಾದ ಪ್ರಾಕೃತಿಕ ಸೌಂದರ್ಯದಿಂದ ಹರಸಲ್ಪಟ್ಟಿದ್ದು, ಇಲ್ಲಿ ಕೆಲವೊಂದು ಪ್ರಾಚೀನ ಅವಶೇಷಗಳೂ ಕೂಡ ಇವೆ.  ಮುಖಿಗುಡದಲ್ಲಿ (Mukhiguda) ದಟ್ಟವಾದ, ಹಚ್ಚ ಹಸುರಿನ ಕಾನನದ ನಡುವೆ ಹಾಗೂ ಬೆಟ್ಟಗಳ ನಡುವೆ ಇರುವ ಇಂದ್ರಾವತಿ ಅಣೆಕಟ್ಟು, ಅತೀ ಪ್ರಮುಖವಾದ ಪ್ರವಾಸೀ ತಾಣಗಳಲ್ಲೊಂದಾಗಿದೆ.  ಖೈರ್ ಪದರ್ ಮತ್ತು ಗೋಲಾಮುಂಡಾಗಳಂತಹ ಸಣ್ಣ ಗ್ರಾಮಗಳು ತನ್ನ ಪ್ರವಾಸಿಗರಿಗಾಗಿ, ನಯನ ಮನೋಹರವಾದ ಮನಸೂರೆಗೊಳ್ಳುವಂತಹ ಬಯಲುಪ್ರದೇಶಗಳನ್ನು ಹೊಂದಿದೆ.

ಕೊಕ್ಸರಾವು ಧರಮಗಡದಲ್ಲಿರುವ ಮತ್ತೊಂದು ಸಣ್ಣ ಗ್ರಾಮವಾಗಿದ್ದು, ಈ ಗ್ರಾಮದ ನಿಪುಣ ಕಲಾವಿದರು ಶಿಲೆಗಳಲ್ಲಿ ರಚಿಸಿರುವ ಅದ್ಭುತ ಕಲಾಕೃತಿಗಳಿಗಾಗಿ ಈ ಗ್ರಾಮವು ಕೀರ್ತಿ ಪಡೆದಿದೆ.  ಈ ಗ್ರಾಮವು ಶಿವ ದೇವಸ್ಥಾನ, ದಂತೇಶ್ವರಿ ದೇವಸ್ಥಾನ, ಬುದ್ಧರಾಜ ದೇವಸ್ಥಾನ, ಮತ್ತು ಶ್ರೀ ಜಗನ್ನಾಥ ದೇವಸ್ಥಾನಗಳಂತಹ ಕೆಲವೊಂದು ಪುರಾತನ ದೇವಸ್ಥಾನಗಳ ಆಶ್ರಯ ತಾಣವೂ ಆಗಿದೆ.

ಧರಮಗಡವನ್ನು ಸಂದರ್ಶಿಸಲು ಪ್ರಶಸ್ತ ಕಾಲಾವಧಿ

ಸೆಪ್ಟೆಂಬರ್ ತಿಂಗಳಿನಿಂದ ಮಾರ್ಚ್ ತಿಂಗಳವರೆಗಿನ ಅವಧಿಯಯಲ್ಲಿ  ಧರಮಗಡದ ಪ್ರವಾಸೋದ್ಯಮವು ತನ್ನ ಚರಮಸೀಮೆಯನ್ನು ತಲುಪುತ್ತದೆ.

ಧರಮಗಡವನ್ನು ತಲುಪುವುದು ಹೇಗೆ ?

ಧರಮಗಡವು ದಕ್ಷಿಣ ಒಡಿಶಾದ ಪ್ರಮುಖ ಪ್ರವಾಸೀ ತಾಣಗಳಲ್ಲೊಂದಾಗಿರುವುದರಿಂದ ಈ ಪಟ್ಟಣವು ರಸ್ತೆಗಳು ಮತ್ತು ರೈಲ್ವೆ ಸೇವೆಗಳಿಂದ ಸುಸಜ್ಜಿತಗೊಂಡಿದೆ. ಅನೇಕ ಸರಕಾರೀ ಸ್ವಾಮ್ಯದ ಬಸ್ಸುಗಳು ಮತ್ತು ಖಾಸಗೀ ಸುಖಾಸೀನ ಬಸ್ಸುಗಳು ಪ್ರವಾಸಿಗರ ಸಂವಹನಕ್ಕಾಗಿ ಲಭ್ಯವಿವೆ.  ಪ್ರವಾಸೀ ಸಂಸ್ಥೆಗಳು ಒದಗಿಸುವ ಅನೇಕ ಪ್ರವಾಸೀ ಪ್ಯಾಕೇಜುಗಳು, ಪ್ರವಾಸಿಗರು ಧರಮಗಡದ ಎಲ್ಲಾ ಪ್ರಮುಖ ಪ್ರವಾಸೀ ತಾಣಗಳಿಗೆ ಸಂಪರ್ಕಿಸಲು ಸಹಕಾರಿಯಾಗಿವೆ.

ಧರಮಗಡದ ಹವಾಮಾನ.

ಸೆಪ್ಟೆಂಬರ್ ತಿಂಗಳಿನಿಂದ ಮಾರ್ಚ್ ತಿಂಗಳಿನವರೆಗಿನ ಅವಧಿಯಲ್ಲಿ ಇಲ್ಲಿನ ವಾತಾವರಣವು ತಂಪಾಗಿರುವುದರಿಂದ, ಧರಮಗಡಕ್ಕೆ ಪ್ರವಾಸ ಕೈಗೊಳ್ಳಲು ಈ ಅವಧಿಯು ಅತೀ ಪ್ರಶಸ್ತವಾದ ಕಾಲವಾಗಿದೆ. ಈ ಅವಧಿಯಲ್ಲಿ, ಸೂರ್ಯನ ಎಳೆಬಿಸಿಲು ಮತ್ತು ದಿನವಿಡೀ ಬೀಸುವ ತಂಗಾಳಿಯು ಪ್ರಯಾಣವನ್ನು ಅಪ್ಯಾಯಮಾನವಾಗಿಸುತ್ತದೆ.  ಈ ಅವಧಿಯಲ್ಲಿ ಮೈಮೂಳೆ ಕೊರೆಯುವ ಚಳಿಯಿಂದ ರಕ್ಷಿಸಿಕೊಳ್ಳಲು, ಪ್ರವಾಸಿಗರು ಸಾಕಷ್ಟು ಬೆಚ್ಚಗಿನ ಬಟ್ಟೆಗಳನ್ನು ಕೊಂಡೊಯ್ಯುವಂತೆ ಶಿಪಾರಸು ಮಾಡಲಾಗಿದೆ.

ಧರಮಗಡ್ ಪ್ರಸಿದ್ಧವಾಗಿದೆ

ಧರಮಗಡ್ ಹವಾಮಾನ

ಉತ್ತಮ ಸಮಯ ಧರಮಗಡ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಧರಮಗಡ್

  • ರಸ್ತೆಯ ಮೂಲಕ
    ಧರಮಗಡವು ಒಡಿಶಾದ ಪ್ರಮುಖ ಪ್ರವಾಸೀ ತಾಣಗಳಲ್ಲೊಂದಾಗಿರುವುದರಿಂದ, ಇದು ರಾಜ್ಯದ ಎಲ್ಲಾ ಪ್ರಮುಖ ಪಟ್ಟಣಗಳೊಡನೆಯೂ ಅತ್ಯುತ್ತಮ ಸಂಪರ್ಕವನ್ನು ಹೊಂದಿದೆ. ರಾಜ್ಯ ಸರಕಾರೀ ಸ್ವಾಮ್ಯದ ಬಸ್ಸುಗಳು ಮತ್ತು ಖಾಸಗೀ ಸುಖಾಸೀನ ಬಸ್ಸುಗಳು ಭುವನೇಶ್ವರ್ ಮತ್ತು ಕಟಕ್ ನಿಂದ ಧರಮಗಡಕ್ಕೆ ತಲುಪಲು ಲಭ್ಯವಿವೆ. ಸನಿಹದ, ಆಸುಪಾಸಿನ ಸ್ಥಳಗಳಿಂದ ಟ್ಯಾಕ್ಸಿಯ ಸೇವೆಗಳೂ ಕೂಡ ಲಭ್ಯವಿವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಅತೀ ಸಮೀಪದ ರೈಲ್ವೆ ನಿಲ್ದಾಣವು ಕೇಸಿಂಗ ರೈಲ್ವೆ ನಿಲ್ದಾಣವಾಗಿದ್ದು, ಇದು ಸುಮಾರು 50 ಕಿ.ಮೀ. ದೂರದಲ್ಲಿದೆ. ಈ ರೈಲ್ವೆ ನಿಲ್ದಾಣವು ರಾಜ್ಯದ ಎಲ್ಲಾ ಪ್ರಮುಖ ಪಟ್ಟಣಗಳೊಡನೆ ಸಂಪರ್ಕವನ್ನು ಹೊಂದಿದೆ ಮಾತ್ರವಲ್ಲದೆಯೇ ದೇಶದ ಇತರ ಭಾಗಗಳೊಡ ನೆಯೂ ಸಂಪರ್ಕ ಹೊಂದಿದೆ. ಇಲ್ಲಿಂದ ಪ್ರವಾಸಿಗರು ಧರಮಗಡಕ್ಕೆ ತಲುಪಲು ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆಯಬಹುದು ಇಲ್ಲವೇ ಬಸ್ಸಿನ ಮೂಲಕವೂ ಪ್ರಯಾಣಿಸಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಛತ್ತೀಸ್ ಗಡದಲ್ಲಿರುವ ರಾಯ್ ಪುರ್ ವಿಮಾನ ನಿಲ್ದಾಣವು (Raipur Airport) ಧರಮಗಡಕ್ಕೆ ಅತೀ ಸಮೀಪದಲ್ಲಿರುವ ವಿಮಾನನಿಲ್ದಾಣವಾಗಿದ್ದು, ಇದು ಸುಮಾರು 239 ಕಿ.ಮೀ. ನಷ್ಟು ದೂರದಲ್ಲಿದೆ. ಆದಾಗ್ಯೂ, ಒಡಿಶಾಕ್ಕೆ ಪ್ರಯಾಣಿಸುವ ಪ್ರವಾಸಿಗರಿಗೆ, ಭುವನೇಶ್ವರದಲ್ಲಿರುವ ಬಿಜು ಪಾಟ್ನಾಯಕ್ ಅಂತರಾಷ್ಟ್ರೀಯ ವಿಮಾನನಿಲ್ದಾಣವು ಅತೀ ಸಮೀಪದ ವಿಮಾನನಿಲ್ದಾಣವಾಗಿದೆ. ಈ ಎರಡೂ ವಿಮಾನನಿಲ್ದಾಣಗಳಿoದ ಪ್ರವಾಸಿಗರು ಬಸ್ಸಿನ ಮೂಲಕ ಇಲ್ಲವೇ ಟ್ಯಾಕ್ಸಿಯೊಂದನ್ನು ಬಾಡಿಗೆಗೆ ಪಡೆದು ಧರಮಗಡಕ್ಕೆ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat