ಛತ್ತೀಸಗಡ್ ನ ಧಮತರಿ ಜಿಲ್ಲೆಯಲ್ಲಿರುವ ಸೀತಾನದಿ ವನ್ಯಜೀವಿ ಅಭಯಾರಣ್ಯ ಮಧ್ಯ ಭಾರತದ ಖ್ಯಾತ ಹಾಗೂ ಮುಖ್ಯ ವನ್ಯಜೀವಿ ರಕ್ಷಿತಾರಣ್ಯಗಳಲ್ಲಿ ಒಂದಾಗಿದೆ. ಈ ಅಭಯಾರಣ್ಯದ ಮಧ್ಯದಲ್ಲಿ ಉಗಮವಾಗಿವ ಸೀತಾನದಿ ನದಿಯಿಂದಾಗಿ ಈ ಹೆಸರು ದೊರಕಿದೆ. ಈ ಅಭಯಾರಣ್ಯವು ಇಲ್ಲಿನ ಸುಂದರ, ಹಚ್ಚ ಹಸುರಿನ ಸಸ್ಯರಾಶಿ ಹಾಗೂ ಅಪೂರ್ವ ಪ್ರಾಣಿಸಂಕುಲಕ್ಕೆ ಹೆಸರುವಾಸಿಯಾಗಿದೆ.
ಇಲ್ಲಿನ ಸಸ್ಯ ಸಂಪತ್ತು ಮುಖ್ಯವಾಗಿ ಸಾಲ್, ತೇಗ ಹಾಗೂ ಬಿದಿರಿನ ಕಾಡುಗಳನ್ನು ಒಳಗೊಂಡಿದೆ. ಸೀತಾನದಿ ವನ್ಯಜೀವಿ ರಕ್ಷಿತಾರಣ್ಯದಲ್ಲಿ ಕಂಡುಬರುವ ಮುಖ್ಯ ವನ್ಯ ಜೀವಿಗಳು ಹುಲಿ, ಚಿರತೆ ಹಾಗೂ ಇತರ ಕಾಡು ಮೃಗಗಳಾಗಿವೆ. ಈ ರಕ್ಷಿತಾರಣ್ಯದಲ್ಲಿ ಹಕ್ಕಿಗಳ ಸಂಖ್ಯೆಯೂ ಸೇರಿವೆ.


Click it and Unblock the Notifications