Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಮೆಹರೂಲಿ ಆರ್ಕಿಯಾಲಾಜಿಕಲ್‌ ಪಾರ್ಕ್

ಮೆಹರೂಲಿ ಆರ್ಕಿಯಾಲಾಜಿಕಲ್‌ ಪಾರ್ಕ್, ದೆಹಲಿ

5

ದಕ್ಷಿಣ ದಿಲ್ಲಿಯ ಕುಬ್‌ ಕಾಂಪ್ಲೆಕ್ಸ್‌ ಸಮೀಪದಲ್ಲಿದೆ ಈ ಮೆಹರೂಲಿ ಆರ್ಕಿಯಾಲಾಜಿಕಲ್‌ ಪಾರ್ಕ್. ವಿಶ್ವದಲ್ಲಿಯೇ ಅತಿಹೆಚ್ಚು ಸಂಖ್ಯೆಯ ಸ್ಮಾರಕಗಳು ಇಲ್ಲಿವೆ. ಹಲವು ಸಮಯಗಳ ಕಾಲ ಈ ಅರಣ್ಯ ಆವೃತ್ತ ಪ್ರದೇಶಕ್ಕೆ ಪ್ರವೇಶಾವಕಾಶವೇ ಇರಲಿಲ್ಲವೆಂಬುದು ಗಮನಿಸಬೇಕಾದ ಸಂಗತಿ.

ಇಲ್ಲಿ ಸ್ಮಾರಕಗಳನ್ನು ಹೊರತುಪಡಿಸಿದರೆ 100 ಎಕರೆ ಪ್ರದೇಶ ಸಿಗುತ್ತದೆ. ಇಲ್ಲಿ ಮಸೀದಿಗಳು, ಟೊಂಬ್‌ಗಳು, ಉದ್ಯಾನ (ಇದ್ಯಾವುದಕ್ಕೂ ಹೆಸರಿಲ್ಲ)ಗಳು ಸಿಗುತ್ತವೆ. ಇಲ್ಲಿ ಬಾಲ್‌ಬನ್ ಟೊಂಬ್‌ ಕೂಡ ಇದೆ. ಇದನ್ನು ಗೀಯಾಸ್‌- ಉದ್‌- ದಿನ್‌ ಬಾಲ್‌ಬನ್‌ ಅವರಿಗೆ ಗೌರವಸೂಚಕವಾಗಿ ನಿರ್ಮಿಸಿದ್ದಾಗಿದೆ. ಈತ ದಿಲ್ಲಿ ಸುಲ್ತಾನರ ಆಡಳಿತ ಅವಧಿಯ 1266 ರಿಂದ 1287ರ ನಡುವಿನ ಅವಧಿಯಲ್ಲಿ ಆಡಳಿತ ನಡೆಸಿದ್ದ. ಸೂಕ್ತ ಶಿಲ್ಪವಾಗಿ ನಿರ್ಮಿಸಿದ ದೇಶದ ಪ್ರಥಮ ನಿರ್ಮಾಣ ಎಂಬ ಹೆಗ್ಗಳಿಕೆಯನ್ನೂ ಇದು ಹೊಂದಿದೆ.

ದಿ ಜಮಾಲಿ-ಕಮಾಲಿ ಮಸೀದಿ ಕೂಡ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯ ಕಥೆ ಹೊಂದಿದೆ. ಈ ಮಸೀದಿಗೆ ಜಲಾಲ್‌ ಖಾನ್‌ರ ಹೆಸರನ್ನು ಇಡಲಾಗಿದೆ. ಈತ ಸಿಕಂದರ ಲೋದಿ ಹಾಗೂ ಹುಮಾಯೂನ್‌ನ ಕಾಲದಲ್ಲಿ ಜನಪ್ರಿಯ ಕವಿ ಹಾಗೂ ಸಂತನಾಗಿದ್ದ. ಆದರೆ, ಇದಕ್ಕೆ ಏಕೆ ಕಮಾಲಿ ಅನ್ನುವ ಶಬ್ಧವೂ ಸೇರಿದೆ ಎನ್ನುವುದಕ್ಕೆ ಯಾರ ಬಳಿಯೂ ವಿವರ ಇಲ್ಲ.

ಪಾರ್ಕ್ ಒಳಗಿನ ಇತರೆ ಆಕರ್ಷಣೆಗಳೆಂದರೆ ಮೆಟ್‌ಕಾಲ್ಫ್ಸ್‌ ಕೆನೋಪಿ, ಮೆಟ್‌ಕಾಲ್ಫ್ಸ್‌ಬೂಟ್‌ಹೌಸ್‌, ಕ್ವೀಲ್‌ ಖಾನ್‌ರ ಟೊಂಬ್‌, ಮೆಟ್‌ಕಾಲ್ಫ್ಸ್‌ಅವರ ಗನ್‌ಸ್ಟೋರ್‌, ರಾಜನ್‌ ಕಿ ಬಾವೋಲಿ, ಗಂಧಕ್‌ ಕಿ ಬಾವೋಲಿ, ಮೌಲಾನಾ ಮುಜುದ್ದೀನ್ಸ್‌ ಟೊಂಬ್‌, ಖಾನ್‌ ಶಹಾದೀಸ್‌ ಟೊಂಬ್‌, ಅದಾಹಂ ಖಾನ್ಸ್‌ ಟೊಂಬ್‌, ಇನ್ನೂ ಅನೇಕ ಮಂದಿಯ ಹೆಸರು ತಿಳಿಯದ ಹಾಗೂ ಕಡಿಮೆ ಜನಪ್ರಿಯತೆ ಸಾಧಿಸಿದ್ದ ವ್ಯಕ್ತಿಗಳ ಸ್ಮಾರಕ ಹಾಗೂ ಶಿಲ್ಪಗಳು ಇಲ್ಲಿವೆ.

ವಿಶ್ವವನ್ನು ಅರಿಯಲು ಬಯಸುವ ಮನಸ್ಸು ನಿಮ್ಮದಾಗಿದ್ದರೆ ಮೆಹರೂಲಿ ಆರ್ಕಿಯಾಲಾಜಿಕಲ್‌ ಪಾರ್ಕ್ ಅತ್ಯುತ್ತಮ ತಾಣ. ನಿಮ್ಮನ್ನು ಪ್ರೀತಿಸುವವರ ಜತೆ ಒಂದಿಷ್ಟು ಕಾಲ ಕಳೆಯ ಬಯಸಿದರೆ ನಗರ ದಟ್ಟಣೆ, ಒತ್ತಡ, ಶಬ್ಧಗಳ ಆಚೆ ಬಂದು ಕಳೆಯಲು ಇದಕ್ಕಿಂತ ಇನ್ನೊಂದು ಉತ್ತಮ ತಾಣ ಬೇರೆ ಇಲ್ಲ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri