ಹರಿರಾಯಾ ದೇವಾಲಯವು ಹಿಂದು ದೇವರಾದ ವಿಷ್ಣುವಿನ ಆಲಯವಾಗಿದೆ. ಡಾಲ್‌ಹೌಸಿಯ ಹೃದಯಭಾಗದಲ್ಲಿ ಈ ದೇಗುಲವಿದೆ. ಇದನ್ನು ಕಲ್ಲಿನಿಂದ ಕಟ್ಟಲಾಗಿದೆ. ಇದನ್ನು ಶಿಖರ ಮಾದರಿಯ ವಾಸ್ತುಶಿಲ್ಪ ಬಳಸಿ ನಿರ್ಮಿಸಲಾಗಿದೆ. ಇಲ್ಲಿ ಕಂಚಿನ ಮೂರ್ತಿ ಇದೆ. ಇದು ಚತುರ್ಮುರ್ತಿ ಎಂದೇ ದೇವಾಲಯದಲ್ಲಿ ಪ್ರಸಿದ್ಧಿಯಾಗಿದೆ. ಮೂರ್ತಿಯು ಮೂರು ಮುಖವನ್ನು ಒಳಗೊಂಡಿದೆ. ಎಂಟು ವಿಧದ ದಾತುವನ್ನು ಒಳಗೊಂಡು ಇದು ನಿರ್ಮಾಣಗೊಂಡಿದ್ದು, ಅಂದಿನ ಶಿಲ್ಪಿಯ ಜಾಣ್ಮೆಯನ್ನು ಪ್ರದರ್ಶಿಸುತ್ತದೆ. ಈ ದೇವಾಲಯದಲ್ಲಿರುವ ವಿಗ್ರಹವು ಕೈಬೆರಳಿನ ಉಂಗುರ, ಬ್ರೆಸ್‌ಲೆಟ್, ಕತ್ತಿನ ಚೈನು, ಕ್ರೌನ್ಸ್, ನೆಕ್ಲೆಸ್, ಮುತ್ತಿನ ಸರ, ಕುಂಡಲಿಗಳನ್ನು ಒಳಗೊಂಡಿದ್ದು ಗಮನಸೆಳೆಯುತ್ತವೆ.
ಕೇಸರಿ ಬಣ್ಣದ ಈ ದೇವಾಲಯ 11ನೇ ಶತಮಾನದ ನಿರ್ಮಾಣ. ಇಲ್ಲಿ ಶಿವ, ಸೂರ್ಯ, ಅರುಣ ದೇವರ ವಿಗ್ರಹ ಇದೆ. ದೇವಾಲಯಕ್ಕೆ ಅತ್ಯಾಕರ್ಷಕವಾಗಿ ಕೆತ್ತಿದ ಶಿಖರ ಇದೆ. ಇದಕ್ಕೆ ಅತ್ಯಾಕರ್ಷಕವಾದ ಕೆತ್ತನೆ ಮಾಡಲಾಗಿದೆ. ವಿಷ್ಣುವು ಆರು ಕುದುರೆಯನ್ನೊಳಗೊಂಡ ರಥವನ್ನೇರಿರುವ ದೃಶ್ಯ ಚಿತ್ರಿಸಲಾಗಿದೆ.


Click it and Unblock the Notifications