ಮಾಯಾವತಿ ಆಶ್ರಮವನ್ನು ಅದ್ವೈತ ಆಶ್ರಮ ಎಂದೂ ಕರೆಯುತ್ತಾರೆ. ಇದು ಚಂಪಾವತ್ ನಿಂದ 22 ಕಿ.ಮೀ ದೂರದಲ್ಲಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 1940 ಮೀ ಎತ್ತರದಲ್ಲಿದ್ದು ಭಾರತ ಮತ್ತು ವಿದೇಶ ಸೇರಿದಂತೆ ಬಹಳ ಮಂದಿ ಪ್ರವಾಸಿಗರನ್ನು ಸೆಳೆಯುತ್ತದೆ.
1898 ರಲ್ಲಿ ಸ್ವಾಮಿ ವಿವೇಕಾನಂದರು ಅಲ್ಮೋರಾಗೆ ಮೂರನೆಯ ಬಾರಿ ಭೇಟಿ ನೀಡಿದಾಗ ಮದ್ರಾಸ್ ನಲ್ಲಿದ್ದ ತಮ್ಮ ‘ಪ್ರಬುದ್ಧ ಭಾರತ’ ಮುದ್ರಣವನ್ನು ಮಾಯಾವತಿಗೆ ತರಲು ನಿರ್ಧರಿಸಿದರು. ಆಗಿನಿಂದ ಈ ಮಾಸಿಕ ಪತ್ರಿಕೆ ಇಲ್ಲೇ ಪ್ರಕಟಗೊಳ್ಳುತ್ತಿದೆ. ಅದಲ್ಲದೆ ಆಶ್ರಮದಲ್ಲಿ ಸಣ್ಣ ಗ್ರಂಥಾಲಯ ಮತ್ತು ವಸ್ತು ಸಂಗ್ರಹಾಲಯವೂ ಇದೆ. ಮುಂಚಿತವಾಗಿ ತಿಳಿಯಪಡಿಸಿದ ಪ್ರವಾಸಿಗರಿಗೆ ವಸತಿ ವ್ಯವಸ್ಥೆಯನ್ನೂ ಮಾಡಲಾಗುತ್ತದೆ.


Click it and Unblock the Notifications